ಲಾರಿ ಅಡ್ಡಗಟ್ಟಿ 4 ಲಕ್ಷ ರೂ. ದರೋಡೆ
Update: 2017-04-06 11:30 IST
ಮಂಗಳೂರು, ಎ. 6: ತಂಡವೊಂದು ಲಾರಿಯೊಂದನ್ನು ಅಡ್ಡಗಟ್ಟಿ ಲಕ್ಷಾಂತರ ರೂ. ದರೋಡೆಗೈದಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿಘಾಟಿಯಲ್ಲಿ ಇಂದು ಮುಂಜಾವ ನಡೆದಿದೆ.ಬೆಳ್ಗಿನ ಜಾವ ಸುಮಾರು 4 ಗಂಟೆ ಹೊತ್ತಿಗೆ ಕಾರೊಂದರಲ್ಲಿ ಬಂದ ತಂಡವು ಶಿರಾಡಿ ಘಾಟಿಯಲ್ಲಿ ಸಂಚರಿಸುತ್ತಿದ್ದ ಲಾರಿಯ್ಡಿಂದನ್ನು ತಡೆದಿದೆ. ಲಾರಿಯೊಳಗೆ ನುಗ್ಗಿದ ತಂಡ ಚಾಲಕನನ್ನು ಬೆದರಿಸಿ ಸುಮಾರು 4 ಲಕ್ಷ ರೂ.ಗಳನ್ನು ದರೋಡೆಗೈದಿದೆ ಎನ್ನಲಾಗಿದೆ.ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.