×
Ad

ಮಂಗಳೂರು ನಗರ ದಕ್ಷಿಣ-ಉತ್ತರ ಕ್ಷೇತ್ರ ಬಿಜೆಪಿ ಸಮಿತಿ ಧರಣಿ

Update: 2017-04-06 11:45 IST

ಮಂಗಳೂರು, ಎ.6: ತುಂಬೆ ವೆಂಟೆಡ್ ಡ್ಯಾಂನಲ್ಲಿ ಸಾಕಷ್ಟು ನೀರಿದ್ದರೂ ಕೂಡ ಮೇಯರ್ ಕವಿತಾ ಸನಿಲ್ ಮಂಗಳೂರು ಮಹಾನಗರಕ್ಕೆ ನೀರು ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಮತುತಿ ತಮಗೆ ಬೇಕಾದಂತೆ ನೀರು ಪೂರೈಕೆ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ ಎಂದು ಆರೋಪಿಸಿ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ವಿಧಾನ ಸಭಾ ಕ್ಷೇತ್ರ ಬಿಜೆಪಿ ಸಮಿತಿಯು ಗುರುವಾರ ಮಂಗಳೂರು ಆರ್‌ಟಿಒ ಕಚೇರಿ ಮುಂದೆ ಧರಣಿ ನಡೆಸಿತು.ಮನಪಾದ ಈ ಧೋರಣೆಯಿಂದ ನಗರದ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮನಪಾ ಆಡಳಿತಾರೂಢ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀರಿಗೆ ಸಂಬಂಧಿಸಿದಂತೆ ವ್ಯತಿರಿಕ್ತ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.ಧರಣಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕ ಯೋಗೀಶ್ ಭಟ್, ಬಿಜೆಪಿ ಮುಖಂಡ ನಿತಿನ್ ಕುಮಾರ್ ವೇದವ್ಯಾಸ್ ಕಾಮತ್, ಜಗದೀಶ್, ಕಿರಣ್ ರೈ, ಭಾಸ್ಕರಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಉಮನಾಥ ಅಮೀನ್, ಗಾಡ್ವಿನ್ ಡಿಸೋಜ, ಮುತ್ತಲಿಬ್, ಕಾರ್ಪೊರೇಟರ್‌ಗಳಾದ ದಿವಾಕರ್, ಮೀರಾ ಕರ್ಕೇರಾ ಮತಿತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News