×
Ad

ಲಾಠಿ ಪ್ರಹಾರ ಅಭಿವ್ಯಕ್ತಿ ಸ್ವಾತಂತ್ರ್ಯವುನ್ನು ಕಸಿದುಕೊಳ್ಳುವ ಪ್ರಯತ್ನ: ಇಂಡಿಯನ್ ಸೋಶಿಯಲ್ ಫಾರಂ ರಿಯಾದ್

Update: 2017-04-06 14:41 IST

ರಿಯಾದ್, ಎ. 6; ಜೋಕಟ್ಟೆಯ ಅಹಮದ್ ಖುರೇಷಿ ಎಂಬ ಯುವಕನನ್ನು ಸತತ ಆರು ದಿವಸ ಕಾನೂನು ಬಾಹಿರವಾಗಿ ಬಂಧನದಲ್ಲಿಟ್ಟುಕೊಂಡು ಚಿತ್ರಹಿಂಸೆ ನೀಡಿ ಎರಡೂ ಮೂತ್ರ ಪಿಂಡಗಳು ವೈಫಲ್ಯಕ್ಕೆ ಕಾರಣರಾದ ಮಂಗಳೂರು  ಪೊಲೀಸ್ ಇಲಾಖೆಯ ವಿರುದ್ದ ಪ್ರತಿಭಟನೆ ನಡೆಸಿದಂತಹ  ಯುವಕರ ಮೇಲೆ ಪೋಲೀಸರು ತೀವ್ರತರವಾದ  ದಾಳಿಯನ್ನು ಮಾಡಿದ್ದಾರೆ. ಇದನ್ನು ಇಂಡಿಯನ್ ಸೋಶಿಯಲ್ ಫಾರಂ ತೀವ್ರವಾಗಿ ಖಂಡಿಸಿದೆ ಮಾತ್ರವಲ್ಲ, ನ್ಯಾಯ ದೊರಕಿಸಬೇಕಾದ ಪೊಲೀಸರು ಮೂಲ ವಿಷಯವನ್ನು ಬೇರೆಡೆ ಪಲ್ಲಟಿಸಿ ಈ ರೀತಿ ದೌರ್ಜನ್ಯ ಎಸಗಿರುವುದು ನಿಜಕ್ಕೂ ನಾಗರಕ ಸಮಾಜಕ್ಕೆ ತೆಲೆ ತಗ್ಗಿಸುವ ವಿಚಾರ. ಇಂಡಿಯನ್ ಸೋಶಿಯಲ್ ಫಾರಂ ಈ ಅಮಾನವೀಯ ದೌರ್ಜನ್ಯವನ್ನು ತೀವ್ರವಾದ ಕಟು ಶಬ್ದಗಳಿಂದ ಖಂಡಿಸುತ್ತದೆ.

          ಇಲ್ಲಿ ಅತಿ ಮುಖ್ಯವಾಗಿ ಕೆಲವು ವಿಷಯವನ್ನು ಗಮನಿಸಬೇಕಿದೆ. ಸತತ ೬ ದಿನಗಳ ಕಾಲ ಕಾನೂನು ಬಾಹಿರವಾಗಿ ಬಂಧನಕ್ಕೊಳಪಡಿಸಿ ಚಿತ್ರಹಿಂಸೆ ನೀಡಿದ ಪೋಲಿಸರು. ಎರಡನೆಯದು ಈ ಚಿತ್ರಹಿಂಸೆ ನೀಡಿದ ಪೊಲೀಸರ ವಿರುದ್ದ  ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ನಡೆದ ಹಿಂಸೆ ಇವೆರಡೂ ಕೂಡ ನಾವು ಬಹಳ ಮುಖ್ಯವಾದಂತಹ ದಕ್ಷಿಣ ಕನ್ನಡದ ಪೊಲೀಸರ ಮನಸ್ಥಿತಿಯ ಸಂದರ್ಭದಲ್ಲಿಟ್ಟು ನೋಡಬೇಕಾಗಿದೆ.

           ಈಗಾಗಲೇ ರಾಜ್ಯದಲ್ಲಿ  ಹಲವಾರು ಮುಸ್ಲಿಂ ಯುವಕರನ್ನು  ವಿಚಾರಣೆಯ ನೆಪೆದಲ್ಲಿ ಚಿತ್ರಹಿಂಸೆ ನೀಡುವಂತದ್ದು, ಅಮಾಯಕರನ್ನು ಜೈಲಲ್ಲಿ ಕೊಳೆಯುವಂತೆ ಮಾಡುವುದು, ಪೊಲೀಸ್ ದೌರ್ಜನ್ಯವನ್ನು ಸಹಿಸಲಾರದ ಸ್ಥಿತಿಗೆ ತಲುಪಿದೆ. ಅದು ಜಾನುವಾರು ಸಾಗಾಟಗಾರರ ಮೇಲೆ, ಇನ್ನೂ ಹಲವಾರು ಜನ ಕಿಡ್ನಿ, ಕೈಕಾಲುಗಳನ್ನು, ಕಣ್ಣುಗಳನ್ನು ಕಳೆದುಕೊಂಡ ವ್ಯಕ್ತಿಗಳು ರಾಜ್ಯದಲ್ಲಿದ್ದಾರೆ.

             ಈ ಬಗ್ಗೆ ಗೃಹ ಇಲಾಖೆಯು ತಕ್ಷಣವೇ ಕಾನೂನು ಬಾಹಿರವಾಗಿ ಬಂಧನದಲ್ಲಿದ್ದ ಅಹಮದ್ ಕುರೇಶಿಗೆ ತಕ್ಷಣವೇ ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡಿಸಿ, ಸೂಕ್ತ ಪರಿಹಾರ ನೀಡಬೇಕು ಮತ್ತು ದೌರ್ಜನ್ಯವೆಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೇ ಪ್ರತಿಭಟನಾಕಾರರ ಮೇಲೆ ನಡೆಸಿದ ಲಾಠಿ ಚಾರ್ಜ್ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದಿಕೊಳ್ಳುವ ಪ್ರಯತ್ನವಾಗಿದ್ದು  ಇದರ ನ್ಯಾಯಾಂಗ ತನಿಖೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕಾಗಿ ರಾಜ್ಯ ಸರಕಾರವನ್ನು ಈ ಮೂಲಕ ಆಗ್ರಹಿಸಿದೆ ಎಂದು ಇಂಡಿಯನ್ ಸೋಶಿಯಲ್ ಫಾರಂ ರಿಯಾದ್ ನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News