×
Ad

ಮುಕ್ಕ ಶ್ರೀನಿವಾಸ್ ಸ್ಕೂಲ್ ಅಫ್ ಎಂಜಿನಿಯರಿಂಗ್‌ನಲ್ಲಿ ತಾಂತ್ರಿಕ ಉತ್ಸವ

Update: 2017-04-06 15:06 IST

ಮಂಗಳೂರು, ಎ 6: ಮುಕ್ಕದಲ್ಲಿರುವ ಶ್ರೀ ನಿವಾಸ್ ಸ್ಕೂಲ್ ಅಫ್ ಎಂಜಿನಿಯರಿಂಗ್‌ನಲ್ಲಿ ಎರಡು ದಿವಸಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವ ‘ಟೆಕ್ ಯುವ 2017’ ಕಾರ್ಯಕ್ರಮವು ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಂಪ್ಯೂಟರ್ ತಂತ್ರಜ್ಞ, ಭಾರತೀಯ ಭಾಷೆಗಳ ಲಿಪಿಯ ಅಭಿವೃದ್ಧಿಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಾಡೋಜ ಪ್ರೊ. ಕೆ. ಪಿ. ರಾವ್‌ರವರು ತಾಂತ್ರಿಕ ಉತ್ಸವವನ್ನು ದೀಪ ಬೆಳಗಿಸಿಉದ್ಘಾಟಿಸಿದರು. ಟೆಕ್ ಯುವ 2017 ರ ಮೊದಲನೆಯ ದಿನ ಕರ್ನಾಟಕ ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಹಾಗೂ ನೆರೆ ರಾಜ್ಯಗಳಿಂದ ಸುಮಾರು 700 ಕ್ಕೂ ಅಧಿಕ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿವಿಧ ತಾಂತ್ರಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್ ಬಿ. ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಟೆಕ್ ಯುವ 2017ರ ಸಂಚಾಲಕರು ಮತ್ತು ಕಾಲೇಜಿನ ಉಪಪ್ರಾಂಶುಪಾಲ ಡಾ. ರಾಮಕೃಷ್ಣ ಹೆಗಡೆ, ಡಾ. ರಾಮಕೃಷ್ಣ ಹೆಗಡೆಉಪಸ್ಥಿತರಿದ್ದರು. ವಿದ್ಯಾರ್ಥಿ ವಿಪಿನ್ ವಂದಿಸಿದರು. ವಿದ್ಯಾರ್ಥಿನಿ ಚೈತ್ರಾ ಭಟ್ ಪ್ರಾರ್ಥನೆ ಮಾಡಿದರು. ವಿದ್ಯಾರ್ಥಿನಿ ತಝೀನ್ ಅಂಜುಮ್ ಮತ್ತು ವಿದ್ಯಾರ್ಥಿ ಪ್ರಜ್ವಲ್ ಕುಂದರ್ ಕಾರ್ಯಕ್ರಮವನ್ನು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿವಿಧ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ 250ಕ್ಕೂ ಅಧಿಕ ಮಾದರಿಯ ಭಾವಚಿತ್ರ, ಮಾದರಿ, ಕಲಾ ಪ್ರದರ್ಶನವನ್ನು ಅತಿಥಿಗಳು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News