ರಾಷ್ಟ್ರದ ಶ್ರೇಷ್ಠ ಕಾಲೇಜುಗಳಲ್ಲಿ ಅಲೋಶಿಯಗೆ 44ನೆ ರ್ಯಾಂಕ್‌ರಾಜ್ಯದಲ್ಲಿ 2ನೆ ಸ್ಥಾನ: ಮುಖ್ಯಮಂತ್ರಿ ಅಭಿನಂದನೆ
ಮಂಗಳೂರು, ಎ.6: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ರಾಷ್ಟ್ರೀಯ ಸಂಸ್ಥೆಗಳ ರ್ಯಾಂಕಿಂಗ್ ಚೌಕಟ್ಟಿನಲ್ಲಿ ಸ್ವಾಯತ್ತ ಸಂತ ಅಲೋಶಿಯ ಕಾಲೇಜು ರಾಷ್ಟ್ರದ ಶ್ರೇಷ್ಠ ಕಾಲೇಜುಗಳಲ್ಲಿ 44ನೆ ರ್ಯಾಂಕ್ ಪಡೆದುಕೊಂಡಿದೆ. ಇದೇ ವೇಳೆ ರಾಜ್ಯದಲ್ಲಿ 2ನೆ ಸ್ಥಾನದಲ್ಲಿದೆ. ದೇಶದ ಸುಮಾರು 45,000 ಕಾಲೇಜುಗಳಲ್ಲಿ ಅಲೋಶಿಯಸ್ ಕಾಲೇಜಿಗೆ ಈ ರ್ಯಾಂಕ್ ಲಭ್ಯವಾಗಿದ್ದು, ರಾಜ್ಯದ ಮುಖ್ಯಮಂತ್ರಿಸಿದ್ದರಾಮಯ್ಯ ಕೂಡಾ ಕಾಲೇಜಿನ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿಂದು ಕಾಲೇಜಿನ ಪ್ರಾಂಶುಪಾಲ ರೆ.ಫಾ. ಸ್ವೀಬರ್ಟ್ ಡಿಸಿಲ್ವಾ ತಿಳಿಸಿದ್ದಾರೆ. ವಿದ್ಯಾರ್ಥಿ ಪ್ರತಿಭೆ, ಮಾಡಿರುವ ಸಾಧನೆಗಳು, ಶೈಕ್ಷಣಿಕ ಸಾಧನೆಗಳು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರ ಗುಣಮಟ್ಟ, ಸಂಶೋಧನಾ ಕ್ಷ್ಕೃ್ರೇದಲ್ಲಿ ಸಾಧಿಸಿರುವ ಪ್ರಗತಿ, ಸಂಶೋಧನಾ ಲೇಖನಗಳ ಪ್ರಕಟನೆ, ಮೂಲ ಸೌಕರ್ಯಗಳು, ಕಲಿಕಾ ಸಂಪನ್ಮೂಲ, ಸಂಪನ್ಮೂಲಗಳ ಕ್ರೋಢೀಕರಣ ಹಾಗೂ ಅನುಷ್ಠಾನ ಮೊದಲಾದ ಅನೇಕ ಕ್ಷ್ಝೇತ್ರಗಳ ವೌಲ್ಯಮಾಪನ ಮಾಡಿ ಈ ರ್ಯಾಂಕ್ ನೀಡಲಾಗಿದೆ ಎಂದು ಅವರು ಹೇಳಿದರು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದಿ ಸಚಿವರಾದ ಪ್ರಕಾಶ್ ಜಾವ್ಡೇಕರ್‌ರವರು ಉನ್ನತ ಶಿಕ್ಷಣಗಳ ರ್ಯಾಂಕ್ ಷೋಘಣೆ ಮಾಡುವ ಸಂದರ್ಭ ಇಂತಹ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸಿನ ನೆರವು ಹಾಗೂ ಹೆಚ್ಚಿನ ಸ್ವಾಯತ್ತತೆ ಋನೀಡುವುದಾಗಿ ಭರವಸೆ ನೀಡಿದ್ದು, ಅದನ್ನು ಕಾಲೇಜು ಸ್ವಾಗತಿಸುತ್ತದೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಸಂತ ಅಲೋಶಿಯಸ್ ಸಂಸ್ಥೆಗಳ ಮುಖ್ಯಸ್ಥ ರೆ.ಫಾ.ಡೈನೀಶಿಯಸ್‌ವಾಝ್, ನಿಯೋಜಿತ ಪ್ರಾಂಶುಪಾಲ ರೆ.ಫಾ. ಪ್ರವೀಣ್ ಮಾರ್ಟಿಸ್, ಕುಲಸಚಿವ ಡಾ.ಎ.ಎಂ. ನರಹರಿ, ಐಕ್ಯೂಎಸಿ ಸಂಚಾಲಕ ಡಾ. ಡೆನ್ನಿಸ್ ಫೆರ್ನಾಂಡಿಸ್ ಉಸ್ಥಿತರಿದ್ದರು.