×
Ad

ಪೊಲೀಸ್ ದೌರ್ಜನ್ಯ ಪ್ರಕರಣ: ನ್ಯಾಯಾಂಗ ತನಿಖೆಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಆಗ್ರಹ

Update: 2017-04-06 18:35 IST

ಮಂಗಳೂರು, ಎ.6: ಸಿಸಿಬಿ ಪೊಲೀಸರು ಅಹ್ಮದ್ ಖುರೇಷಿ ಎಂಬಾತನ ಮೇಲೆ ಎಸಗಿದ ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ಆಗ್ರಹಿಸಿದೆ.

ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಮುಹಮ್ಮದ್ ಮಸೂದ್‌ರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಪೊಲೀಸ್ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಿ ಪೊಲೀಸರ ಕೃತ್ಯವನ್ನು ಖಂಡಿಸಲಾಯಿತು.

ಸಭೆಯಲ್ಲಿ ಕಮಿಟಿಯ ಪದಾಧಿಕಾರಿಗಳಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ.ಇ.ಅಶ್ರಫ್, ನೂರುದ್ದೀನ್ ಸಾಲ್ಮರ, ಹಮೀದ್ ಕುದ್ರೋಳಿ, ಡಿ.ಎಂ.ಅಸ್ಲಂ, ಸಿ.ಎಂ. ಮುಸ್ತಫಾ, ಎಂ.ಎ.ಅಶ್ರಫ್, ಸಾದುದ್ದೀನ್ ಎಂ.ಸಾಲಿಹ್, ಇಮ್ತಿಯಾಝ್, ಸಿ.ಎಂ.ಹನೀಫ್, ಉಮರ್ ಪಜೀರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News