ಕೇರಳದಲ್ಲಿ ಹರತಾಳ: ಜನಜೀವನ ಅಸ್ತವ್ಯಸ್ತ

Update: 2017-04-06 13:42 GMT

ತಿರುವನಂತಪುರಂ, ಎ.6: ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ಪಕ್ಷ ಕರೆ ನೀಡಿದ್ದ ಗುರುವಾರ ಮುಂಜಾನೆಯಿಂದ ಮುಸ್ಸಂಜೆಯವರೆಗಿನ ಹರತಾಳದಿಂದ ರಾಜ್ಯದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

 ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆತನ ತಾಯಿ ಮಹಿಜಾರನ್ನು ವಿಚಾರಣೆ ನಡೆಸುವ ಸಂದರ್ಭ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವಿದ್ದು ಇದನ್ನು ವಿರೋಧಿಸಿ ಹರತಾಳ ನಡೆಸಲಾಯಿತು.

  ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಖಾಸಗಿ ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಎಂದಿನಂತೆ ಸಂಚರಿಸಿದ್ದವು. ಆದರೆ ಕೆಲವೆಡೆ ಖಾಸಗಿ ವಾಹನಗಳ ಸಂಚಾರಕ್ಕೂ ತಡೆಯೊಡ್ಡಿದ ಬಗ್ಗೆ ವರದಿಯಾಗಿದೆ. ಅಂಗಡಿ, ಮಾರುಕಟ್ಟೆಗಳು ಮುಚ್ಚಿದ್ದವು. ಸರಕಾರಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ ಕಾಣ ಪ್ರಯಾಣಿಕರಿಗೆ ತೊಂದರೆಯಾಯಿತು.

ಹಲವು ವಿಶ್ವವಿದ್ಯಾನಿಲಯಗಳು ಪರೀಕ್ಷೆಯನ್ನು ಮುಂದೂಡಿದವು. ಆದರೆ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್‌ನ ಪರೀಕ್ಷೆಯನ್ನು ನಡೆಸಲಾಯಿತು. ಹೆಚ್ಚಿನ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳ ಹಾಜರಾತಿ ಕಡಿಮೆಯಿತ್ತು. ಲೋಕಸಭಾ ಉಪಚುನಾವಣೆ ನಡೆಯುತ್ತಿರುವ ಮಲಪ್ಪುರಂ ಕ್ಷೇತ್ರವನ್ನು ಹರತಾಳದಿಂದ ಹೊರಗಿಡಲಾಗಿತ್ತು. ವಿದ್ಯುತ್, ಹಾಲು ಪೂರೈಕೆ, ಆಸ್ಪತ್ರೆ ಸೇವೆ, ಜಾತ್ರೆ.. ಇತ್ಯಾದಿಗಳಿಗೆ ರತಾಳದಿಂದ ವಿನಾಯಿತಿ ನೀಡಲಾಗಿತ್ತು.

  ತಮ್ಮ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಮಹಿಜಾ ಮತ್ತವರ ಸಹೋದರ ತಿರುವನಂತಪುರದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ತಾನೂ ಕೋಝಿಕೋಡ್ ಜಿಲ್ಲೆಯ ವಡಕರದಲ್ಲಿರುವ ಮನೆಯಲ್ಲಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಮಹಿಜಾರ ಪುತ್ರಿ ಅವಿಷ್ಣಾ ತಿಳಿಸಿದ್ದಾರೆ.

 ತಮ್ಮನ್ನು ಇಬ್ಬರು ಪೊಲೀಸರು ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಮಹಿಜಾ ಆರೋಪಿಸಿದ್ದು ಘಟನೆಯ ಬಗ್ಗೆ ತನಿಖೆ ನಡೆಸಿದ್ದ ಐಜಿಪಿ ಮನೋಜ್ ಅಬ್ರಹಾಂ ಇಂು ವರದಿ ಸಲ್ಲಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News