ಕಪಿಲ್ ಶರ್ಮ ಷೋ ಪ್ಯಾಕಪ್ ಮಾಡಿ ಸುನಿಲ್ ಗ್ರೋವರ್ ಷೋ ಪ್ರಾರಂಭಿಸಲಿದೆಯೇ ಸೋನಿ !
ಮುಂಬೈ, ಎ. 6 : 107 ಕೋಟಿ ವಾರ್ಷಿಕ ಒಪ್ಪಂದ ಮಾಡಿ ಕಪಿಲ್ ಶರ್ಮ ರನ್ನು ಇದ್ದಕ್ಕಿದ್ದಂತೆ ಮಾಲಾಮಾಲ್ ಮಾಡಿ ಕಾಮಿಡಿ ಸೂಪರ್ ಸ್ಟಾರ್ ಮಾಡಿದ್ದ ಸೋನಿ ಟಿವಿ ಈಗ ಕಾಟು ನಿರ್ಧಾರಕ್ಕೆ ಬಂದಿದೆ ಎಂದು ಸುದ್ದಿ. ಡಿ ಎನ್ ಎ ವರದಿ ನಿಜ ಎಂದಾದರೆ , ಕಪಿಲ್ ಶರ್ಮ ಅವರ ದಿ ಕಪಿಲ್ ಶರ್ಮ ಷೋ ಗೆ ಸೋನಿ ತೆರೆ ಎಳೆಯಲಿದೆ. ಅಲ್ಲಿಗೆ ಕಾಲಚಕ್ರ ಒಂದು ಸುತ್ತು ಪೂರ್ಣಗೊಳಿಸಿದೆ.
" ಆಸ್ಟ್ರೇಲಿಯಾದಿಂದ ಹಿಂದಿರುಗುವಾಗ ಕಪಿಲ್ ಶರ್ಮ ವಿಮಾನದಲ್ಲಿ ಮಾಡಿಕೊಂಡ ಎಡವಟ್ಟು ನಿರೀಕ್ಷಿದ್ದಕ್ಕಿಂತ ಹೆಚ್ಚು ದುಬಾರಿಯಾಗಿ ಪರಿಣಮಿಸಿದೆ ಎಂದು ಸೋನಿಗೆ ಅನಿಸಿದೆ. ಪ್ರಕರಣ ಕೇವಲ ಕಪಿಲ್ ಶರ್ಮಾಗೆ ವೈಯಕ್ತಿಕವಾಗಿ ಮಾತ್ರ ತಲೆ ನೋವು ತಂದಿಲ್ಲ. ಪ್ರಕರಣದ ಕುರಿತ ನೆಗೆಟಿವ್ ಪ್ರಚಾರದಿಂದ ಚಾನಲ್ ಗೆ ಆರ್ಥಿಕ ನಷ್ಟವಾಗಿದೆ. ಕಪಿಲ್ ಷೋ ರೇಟಿಂಗ್ ಪಾತಾಳ ತಲುಪಿದೆ. ಹಾಗಾಗಿ ಚಾನಲ್ ಕಠಿಣ ನಿರ್ಧಾರಕ್ಕೆ ಬಂದಿದೆ ಎಂದು ಡಿ ಎನ್ ಎ ವರದಿ ಮಾಡಿದೆ. ಅದರಂತೆ ಕಪಿಲ್ ಶರ್ಮ ಷೋ ಹೆಚ್ಚು ಕಡಿಮೆ ಪ್ಯಾಕಪ್ ಆದಂತೆಯೇ.
ಆದರೆ ಅದರ ಜೊತೆಗೆ ಬಂದಿರುವ ಇನ್ನೊಂದು ಸುದ್ದಿ ಏನೆಂದರೆ ಸೋನಿ ಈಗ ಸುನಿಲ್ ಗ್ರೋವರ್ ಗೆ ಹೊಸ ಷೋ ನೀಡುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ. ಕಪಿಲ್ ಶೋಗೆ ಹಿಂದಿರುಗಲು ಚಾನಲ್ ಮಾಡಿದ ವಿನಂತಿಗೆ ಬಗ್ಗದ ಸುನಿಲ್ ರನ್ನು ಹೊಸ ಷೋ ಹೆಸರಲ್ಲಿ ಮತ್ತೆ ಚಾನಲ್ ಗೆ ತರಲು ಸೋನಿ ನಿರ್ಧರಿಸಿದೆ ಎಂದು ಹೇಳಲಾಗಿದೆ. ಸುನಿಲ್ ನಿರ್ವಹಿಸುವ ಖ್ಯಾತ ಪಾತ್ರಗಳಾದ ರಿಂಕು ಭಾಬಿ ಹಾಗು ಡಾ . ಮಶೂರ್ ಗುಲಾಟಿ ಯ ಪೂರ್ಣ ಹಕ್ಕು ಸೋನಿ ಬಳಿಯೇ ಇದೆ . ಇದನ್ನು ಬಳಸಿಕೊಂಡು ಸುನಿಲ್ ರನ್ನು ಸೆಳೆಯಲು ಸೋನಿ ಸಜ್ಜಾಗಿದೆ. ಕಪಿಲ್ ರ ನಖರಾ ಗಳನ್ನೂ ಸಹಿಸುವುದಕ್ಕಿಂತ ಇದೇ ಲಾಭದಾಯಕ ಎಂದು ಸೋನಿ ನಿರ್ಧಾರಕ್ಕೆ ಬಂದಂತಿದೆ.