×
Ad

ಪೊಲೀಸ್ ದೌರ್ಜನ್ಯ: ಪಣಂಬೂರು ಮುಸ್ಲಿಮ್ ಜಮಾತ್ ಖಂಡನೆ

Update: 2017-04-06 21:35 IST

ಸುರತ್ಕಲ್, ಎ.6:ಪಣಂಬೂರು ಮುಸ್ಲಿಮ್ ಜಮಾಅತ್‌ಗೆ ಒಳಪಟ್ಟಿರುವ ಕೈಕಂಬ ನಿವಾಸಿ ಖುರೇಶಿ ಮೇಲೆ ಪೊಲೀಸರು ನಡೆಸಿದ ಅಮಾನವೀಯ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಪಣಂಬೂರು ಮುಸ್ಲಿಮ್ ಜಮಾತ್ ತಿಳಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಜಮಾಅತ್ ಅಧ್ಯಕ್ಷ ಮುಹಮ್ಮದ್ ತಮೀಮ್, ಹಳೇಯ ಪ್ರಕರಣ ವೊಂದಕ್ಕೆ ಸಂಬಂಧಿಸಿ ಕೋರ್ಟ್‌ಗೆ ವಿಚಾರಣೆಗೆಂದು ಬಂದಿದ್ದ ಖುರೈಶಿಯನ್ನು ಕಣ್ಣಿಗೆ ಬಟ್ಟೆಕಟ್ಟಿ, ಕೈಗಳಿಗೆ ಕೋಲ ಹಾಕಿ ಅಮಾನವೀಯ ರೀತಿಯಲ್ಲಿ ವಶಕ್ಕೆ ಪಡೆದುಕೊಂಡು ಮನರಯೊಂದರಲ್ಲಿ ಕೂಡಿ ಹಾಕಿ ಅಮಾನುಷವಾಗಿ ದೈಹಿಕ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿರುವ ಪೊಲೀಸರು ಕ್ರಮವನ್ನು ಪಣಂಬೂರು ಮುಸ್ಲಿಮ್ ಜಮಾಅತ್ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

  ತಪ್ಪಿತಸ್ಥ ಪೊಲೀಸರ ವಿರುದ್ಧ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ತಪ್ಪಿದಲ್ಲಿ ಜಮಾತ್‌ನ ಸರ್ವ ಸದ್ಯರೂ ಜಿಲ್ಲಾಧಿಕಾರಿಯವರ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News