ನೆಹರೂ ಯುವ ಕೇಂದ್ರಕ್ಕೆ ನೇರ ಸಂದರ್ಶನ
Update: 2017-04-06 23:57 IST
ಉಡುಪಿ, ಎ.6: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದಡಿ ಬರುವ ನೆಹರೂ ಯುವ ಕೇಂದ್ರವು ಉಡುಪಿ ಜಿಲ್ಲೆಗೆ 2017-18ನೆ ಸಾಲಿಗೆ ರಾಷ್ಟ್ರೀಯ ಯುವ ಕಾರ್ಯಕರ್ತರ ಯೋಜನೆಯಡಿ ಪ್ರತಿ ತಾಲೂಕಿಗೆ ಇಬ್ಬರಂತೆ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಿದೆ.
ಎಸೆಸೆಲ್ಸಿ, ಪಿಯುಸಿ ಅಥವಾ ಪದವಿ ವಿದ್ಯಾರ್ಹತೆ ಹೊಂದಿರುವ 29 ವರ್ಷದೊಳಗಿನ ಯುವಕ-ಯುವತಿಯರು ಈ ನೇಮಕಾತಿಗೆ ಅರ್ಹರು. ಈ ಬಗ್ಗೆ ನೇರ ಸಂದರ್ಶನವು ಇದೇ ಬರುವ ಎ.13ರಂದು ಪೂರ್ವಾಹ್ನ 11ಕ್ಕೆ ನೆಹರೂ ಯುವ ಕೇಂದ್ರ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ ಬಿ ಬ್ಲಾಕ್, 102ಬಿ, ಮಣಿಪಾಲ ಇಲ್ಲಿ ನಡೆಯಲಿದೆ. ಆಸಕ್ತಿ ಹಾಗೂ ಅರ್ಹತೆ ಇರುವ ಅಭ್ಯರ್ಥಿಗಳು ವಿದ್ಯಾರ್ಹತೆ, ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಯ ಮೂಲ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0820-2574992ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.