×
Ad

ನಾಳೆ ‘ಎನ್‌ಝೋ’ ಉತ್ಪನ್ನಗಳ ಲೋಕಾರ್ಪಣೆ

Update: 2017-04-07 00:14 IST

ಉಡುಪಿ, ಎ. 7: ಹೆಸರಾಂತ ರೈನ್‌ಬೋ ಗ್ರೂಪ್ ಅವರ ಪ್ಲಂಬಿಂಗ್ ಐಟಮ್ಸ್‌ಗಳ ತಯಾರಿಕಾ ಸಂಸ್ಥೆಯ ನೂತನ ಸಂಸ್ಥೆಯಾಗಿ ಕರಾವಳಿ ಕರ್ನಾಟಕದ ಮೊದಲ ಎಲ್‌ಇಡಿ ಲೈಟ್ ತಯಾರಿಕಾ ಘಟಕ ‘ಎನ್‌ಝೋ’ನ ಉತ್ಪನ್ನಗಳು ಎ.8ರಂದು ಲೋಕಾರ್ಪಣೆಗೊಳ್ಳಲಿದೆ. ಕೈಗಾರಿಕೆ ಹಾಗೂ ಗೃಹೋಪಯೋಗಿ ಎಲ್‌ಇಡಿ ಲೈಟ್‌ಗಳ ತಯಾರಿಕಾ ಘಟಕ ಇದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಲಾಗುತ್ತಿದೆ. ಮಣಿಪಾಲದ ಕೈಗಾರಿಕಾ ಪ್ರಾಂಗಣದಲ್ಲಿ ಇರುವ ಈ ಘಟಕ ಈಗಾಗಲೇ ಐಎಸ್‌ಒ 9001:2008 ಪ್ರಮಾಣಪತ್ರ ಪಡೆದಿದ್ದು, ರೊಬೊಟಿಕ್ ತಂತ್ರಜ್ಞಾನ ಅಳವಡಿಸಲಾಗಿದೆ. ವಾಣಿಜ್ಯ, ಗೃಹ ಹಾಗೂ ಕೈಗಾರಿಕೆಗಳಿಗೆ ಅವಶ್ಯಕವಾಗಿರುವ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಬಳಸುವ ಲೈಟ್‌ಗಳನ್ನು ವಿನ್ಯಾಸಗೊಳಿಸಿ, ತಯಾರಿಸಿ ಗುಣಮಟ್ಟದಿಂದ ಕೂಡಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

 ಎನ್‌ಝೋದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಎಡಿಸನ್, ಒಎಸ್‌ಆರ್‌ಎಎಂ ಬ್ರ್ಯಾಂಡೆಡ್ ಎಸ್‌ಎಂಡಿ ಲೆಡ್‌ಗಳನ್ನು ಬಳಸಲಾಗುತ್ತದೆ. ಒಳಾಂಗಣ ಲೈಟ್ಸ್‌ಗಳಿಗೆ ಎಡಿಸನ್ ಹಾಗೂ ಹೊರಾಂಗಣ ಲೈಟ್ಸ್‌ಗಳಿಗೆ ಒಎಸ್‌ಆರ್‌ಎಎಂ ಲೆಡ್‌ಗಳನ್ನು ಬಳಸಲಾಗುತ್ತದೆ. ಎಲ್ಲ ಉತ್ಪನ್ನಗಳಿಗೆ ಎರಡು ವರ್ಷ ವಾರಂಟಿ ಇರಲಿದೆ. ಡೌನ್ ಲೈಟ್, ಸಿಒಬಿ ೆಕಸ್ ಲೈಟ್ಸ್, ಸ್ಟ್ರೀಟ್ ಲೈಟ್ಸ್, ಪೆನಲ್ ಲೈಟ್ಸ್, ್ಲಡ್ ಲೈಟ್ಸ್, ರ್ಸೇಸ್ ಲೈಟ್ಸ್, ಟ್ಯೂಬ್‌ಲೈಟ್ಸ್ ಹೀಗೆ ನಾನಾ ಶ್ರೇಣಿಯ ಎಲ್‌ಇಡಿ ಲೈಟ್ಸ್‌ಗಳು ಲಭ್ಯವಿವೆೆ. ಕಳೆದ ಎರಡು ವರ್ಷಗಳಿಂದ ಎನ್‌ಝೋ ಸಂಸ್ಥೆಯ ವಾಣಿಜ್ಯ, ಅರ್ಕಿಟೆಕ್ಚರಲ್, ಕೈಗಾರಿಕೆ, ಮಳಿಗೆ, ಒಳಾಂಗಣ, ಹೊರಾಂಗಣ, ಸೀಲಿಂಗ್ ಮತ್ತು ಗೂಡಿನ ಲೈಟ್‌ಗಳು ಗುಣಮಟ್ಟದಿಂದ ಕೂಡಿದ ಬ್ರ್ಯಾಂಡ್ ಎನ್ನುವ ಹೆಸರನ್ನು ಪಡೆದಿದೆ.

ಉದ್ಯಮದಲ್ಲಿ 14 ವರ್ಷಗಳ ಕಾಲ ಸುದೀರ್ಘ ಅನುಭವವಿರುವ ಮೂವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರ್ಸ್‌ ಅವರ ಮೇಲ್ವಿಚಾರಣೆಯನ್ನು ಎನ್‌ಝೋ ಬಲ್ಬ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News