ಆರ್‌ಟಿಇ ಕಾಯ್ದೆ: ಮಾಹಿತಿ ನೀಡಲು ಮನವಿ
Update: 2017-04-07 00:15 IST
ಮಂಗಳೂರು, ಎ.6: ಶಿಕ್ಷಣ ಹಕ್ಕು ಕಾಯ್ದೆಯಡಿ ಅಲ್ಪಸಂಖ್ಯಾತವಲ್ಲದ ಶಾಲೆಗಳಲ್ಲಿ ಪ್ರವೇಶ ಕೋರಿ ಆನ್‌ಲೈನ್ ಮೂಲಕ ಸಲ್ಲಿಕೆಯಾಗುತ್ತಿರುವ ಅರ್ಜಿಗಳನ್ನು ಸ್ವೀಕರಿಸುವ ದಿನವನ್ನು ಎ.10ರವರೆಗೆ ವಿಸ್ತರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ.
ಹಾಗಾಗಿ ದ.ಕ. ಜಿಲ್ಲೆಯ ಎಲ್ಲ ಮಸೀದಿ, ಮದ್ರಸಗಳಲ್ಲಿ ಶುಕ್ರವಾರ ಜುಮಾ ನಮಾಝ್ ಬಳಿಕ ಕಡ್ಡಾಯವಾಗಿ ಈ ವಿಷಯದ ಬಗ್ಗೆ ಮಸೀದಿಯ ಇಮಾಮಾರು ಮಾಹಿತಿ ನೀಡಲು ದ.ಕ. ಜಿಲ್ಲಾ ವಕ್ಫ್ ಇಲಾಖಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.