ಡಿಸಿಐಬಿ ಇನ್‌ಸ್ಪೆಕ್ಟರ್ಗೆ ಮುಖ್ಯಮಂತ್ರಿ ಪದಕ
Update: 2017-04-07 00:17 IST
ಮಂಗಳೂರು, ಎ.6: ಡಿಸಿಐಬಿ ಪೊಲೀಸ್ ಇನ್‌ಸ್ಪೆಕ್ಟರ್ ಎ.ಅಮಾನುಲ್ಲಾರಿಗೆ 2016ನೆ ಸಾಲಿನ ಮುಖ್ಯಮಂತ್ರಿಯ ಪದಕ ಲಭಿಸಿದ್ದು, ರವಿವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಿಂದ ಅವರು ಪದಕ ಸ್ವೀಕರಿಸಿದ್ದಾರೆ. ಬಂಟ್ವಾಳ ಕೆಳಗಿನ ಪೇಟೆ ನಿವಾಸಿಯಾಗಿರುವ ಅಮಾನುಲ್ಲಾ ಮಂಡ್ಯ, ಹಾಸನ, ಮೈಸೂರು, ಉತ್ತರ ಕನ್ನಡ, ಕೊಡಗು, ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದು, ಇದೀಗ ದ.ಕ.ಜಿಲ್ಲಾ ಡಿಸಿಐಬಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.