ಕೋಳಿ ಅಂಕಕ್ಕೆ ದಾಳಿ: 28 ಮಂದಿಯ ಬಂಧನ

Update: 2017-04-07 05:25 GMT

ಬಂಟ್ವಾಳ, ಎ.7: ತಾಲೂಕಿನ ಕಾವಳಪಡೂರು ಗ್ರಾಮದ ಮದ್ವ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಕೋಳಿ, ವಾಹನ, ನಗದು ಸಹಿತ 28 ಮಂದಿಯನ್ನು ಬಂಧಿಸಿದರು.

ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿಡಾ. ರವೀಶ್ ಸಿ.ಆರ್. ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ನಾಗೇಶ್ ಮತ್ತು ಸಿಬ್ಬಂದಿಯು ಕೋಳಿ ಅಂಕದಲ್ಲಿ ನಿರತರಾಗಿದ್ದ 28 ಮಂದಿಯನ್ನು ಬಂಧಿಸಿದ್ದಾರೆ.

ಇದೇ ವೇಳೆ ಕೋಳಿ ಅಂಕದಲ್ಲಿ ಕಟ್ಟಿ ಹಾಕಿದ್ದ 23 ಕೋಳಿಗಳು, ಶಾಮಿಯಾನ, 30 ಕುರ್ಚಿಗಳು, 13,085 ರೂ. ನಗದು, 4 ಕಾರು, 5 ಆಟೊರಿಕ್ಷಾ, 22 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News