×
Ad

ನಂದಾವರದಲ್ಲಿ ಗಾಂಜಾ ಮಾರಾಟ ಯತ್ನ: ಓರ್ವನ ಸೆರೆ

Update: 2017-04-07 11:03 IST

ಬಂಟ್ವಾಳ, ಎ.7: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನ್ನು ಡಿಸಿಐಬಿ ಪೊಲೀಸರು ಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ಗುರುವಾರ ರಾತ್ರಿ ನಂದಾವರದಲ್ಲಿ ನಡೆದಿದೆ.

ತೊಕ್ಕೊಟು ಸಮೀಪದ ಕುತ್ತಾರು ನಿವಾಸಿ ಜಮಾಲ್ ಬಂಧಿತ ಆರೋಪಿ. ಈತ ನಂದಾವರಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 200 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಡಿಸಿಐಬಿ ಇನ್‌ಸ್ಪೆಕ್ಟರ್ ಅಮಾನುಲ್ಲಾ ಖಾನ್, ನಗರ ಠಾಣೆ ಎಸ್ಸೈ ಎ.ಕೆ.ರಕ್ಷಿತ್, ಸಿಬ್ಬಂದಿ ಉದಯ, ವಿಜಯ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News