ಏನೋ ಗಂಭೀರ ತೊಂದರೆಯಿಂದಾಗಿ ಮೋದಿ ಪತ್ನಿಯನ್ನು ತೊರೆದಿರಬೇಕು: ಕೇರಳ ಇಂಧನ ಸಚಿವ ಎಂ.ಎಂ.ಮಣಿ ವಿವಾದಾತ್ಮಕ ಹೇಳಿಕೆ
Update: 2017-04-07 12:15 IST
ಕೊಂಡೊಟ್ಟಿ, ಎ.7: ಪ್ರಧಾನಿ ನರೇಂದ್ರಮೋದಿ ತನ್ನ ಪತ್ನಿಯನ್ನು ತೊರೆದದ್ದು ಏನಾದರೂ ಗಂಭೀರವಾದ ತೊಂದರೆ ಇದ್ದುದರಿಂದ ಆಗಿರಬಹುದು ಎಂದು ಕೇರಳ ಇಂಧನ ಸಚಿವ ಎಂ.ಎಂ. ಮಣಿ ಹೇಳಿದ್ದಾರೆ. ಮಲಪ್ಪುರಂ ಲೋಕಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಕೊಂಡೊಟ್ಟಿ ವಿಧಾನಭಾ ಕ್ಷೇತ್ರ ವ್ಯಾಪ್ತಿಯ ವಾಯಯೂರಿನಲ್ಲಿ ಎಲ್ ಡಿಎಫ್ ಅಭ್ಯರ್ಥಿಯ ಸಭೆಯಲ್ಲಿ ಅವರು ಮಾತಾಡುತ್ತಿದ್ದರು.
ನಾನು ಕಳೆ ದ 55 ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿದ್ದೇನೆ. ನಾನು ಪತ್ನಿಯನ್ನು ತೊರೆದಿದ್ದೇನೆ ಎಂದು ಹೇಳಿದರೆ ನನಗೆ ಜೀವಶಾಸ್ತ್ರೀಯವಾದ ತೊಂದರೆ ಇದೆ ಎಂದು ನೀವು ಭಾವಿಸುವುದಿಲ್ಲವೇ? ಮೋದಿಗೆ ಏನೋ ತೊಂದರೆ ಇದೆ. ಮೋದಿಯ ಅಮ್ಮ ಎಟಿಎಂ ಮುಂದೆ ನಿಂತರು ಎಂದು ಮೃದುವಾದ ಭಾಷೆಯಲ್ಲಿ ಹೇಳುವುದು ಮೂರ್ಖತನವಾಗಿದೆ. ಇದಕ್ಕಿಂತ ಬೇರೆ ಮೋಸ ಬೇರೆಯಿಲ್ಲ ಎಂದು ಎಂಎಂಮಣಿ ಆರೋಪಿಸಿದ್ದಾರೆ.