×
Ad

ಡೆಟೊನೇಟರ್ ಸ್ಪೋಟಿಸಿ ಭಾರೀ ಅನಾಹುತ ಸಂಭವಿಸುವುದು ತಪ್ಪಿಸಿದ ಟ್ರಾಕ್ ಮೆನ್ !

Update: 2017-04-07 17:08 IST

ಕಾಸರಗೋಡು, ಎ.7:  ರೈಲ್ವೆ ಹಳಿಯಲ್ಲಿ ಬಿರುಕು ಪತ್ತೆಯಾದ  ಘಟನೆ  ಕಾಞoಗಾಡ್  ಚಿತ್ತಾರಿಯಲ್ಲಿ  ನಡೆದಿದ್ದು, ಟ್ರಾಕ್ ಮೆನ್  ಸಮಯಪ್ರಜ್ಞೆಯಿಂದ ಭಾರೀ ದುರಂತ ಸಂಭವಿಸುವುದು ತಪ್ಪಿದೆ.

ಬೇಕಲ್ ಕೋಟೆ - ಕಾಞoಗಾಡ್ ನಡುವಿನ ಚಿತ್ತಾರಿ ಎಂಬಲ್ಲಿ  ಶುಕ್ರವಾರ ಬೆಳಿಗ್ಗೆ ಹಳಿಯಲ್ಲಿ ಬಿರುಕು ಕಂಡುಬಂದಿದ್ದು, ಹಳಿ ತಪಾಸಣೆ ನಡೆಸುತ್ತಿದ್ದ ಟ್ರಾಕ್ ಮೆನ್  ವಿಜಯನ್ ಇದನ್ನು ಗಮನಿಸಿದ್ದಾರೆ.

ತಿರುವನಂತಪುರ - ಮಂಗಳೂರು,  ಮಲಬಾರ್ ರೈಲು ಕೆಲವೇ ನಿಮಿಷಗಳಲ್ಲಿ ಆಗಮಿಸಲಿತ್ತು.  ಕೂಡಲೇ ಟ್ರಾಕ್ ಮೆನ್ ಬಳಿ ಇದ್ದ  ಡಿಟರ್ನೆಟರ್ ಸ್ಪೋಟಿಸಿ  ಲೋಕೋ  ಪೈಲಟ್  ಗಮನಕ್ಕೆ  ಸೆಳೆದಿದ್ದಾರೆ.  ಡೆಟೊನೇಟರ್ ಸ್ಪೋಟಿಸಿದ್ದರಿಂದ ಹೊಗೆ ಕಂಡು ಬಂದ ಹಿನ್ನಲೆಯಲ್ಲಿ  ಬಿರುಕು ಕಂಡುಬಂದ 600 ಮೀಟರ್ ದೂರದಲ್ಲಿ ರೈಲನ್ನು ನಿಲುಗಡೆ ಗೊಳಿಸಿದರು . ಇದರಿಂದ ಭಾರೀ ದುರಂತ ಸಂಭವಿಸುವುದು ತಪ್ಪಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ  ರೈಲ್ವೆ ಇಂಜಿನೀಯರ್  ತಂಡವು  ದುರಸ್ತಿ ಗೊಳಿಸಿದರು. ಬಿರುಕು ಕಂಡು ಬರುವ ಮೊದಲು ಮಾವೇಲಿ ಎಕ್ಸ್ ಪ್ರೆಸ್ ಸೇರಿದಂತೆ ಮೂರು ರೈಲುಗಳು ಹಾದು ಹೋಗಿದ್ದವು. ಸುಮಾರು   ಎರಡೂವರೆ  ಗಂಟೆಗೆಳ  ಬಳಿಕ  ರೈಲು ಸಂಚಾರ ಆರಂಭಗೊಂಡಿತು  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News