ಮಂಗಳೂರಿನಲ್ಲಿ ಹೊಸ ಕಲ್ಪನೆಯ ‘ಅಡುಗೆ ಮನೆ ’ ಝಾಂಗೋಸ್ ಪ್ರಾರಂಭ
ಮಂಗಳೂರು, ಎ.7: ಜಿಂಜರ್ ಫ್ಯೂಶನ್ ಟಿಕ್ಕಾ, ಪೆರಿ ಪೆರಿ ಚಿಕನ್, ಲೆಮನ್‌ಗ್ರಾಸ್ ರೋಸ್ಟ್, ಪೆಪ್ಪರ್ ರೋಸ್ಟ್..... ಬಹುಶ: ಹೆಸರು ಕೇಳಿದೊಡನೆಯೇ ರುಚಿ ಸವಿಯಬೇಕೆಂದೆನಿಸಬಹುದು. ಇದು ನಗರದ ಅತ್ತಾವರದ ‘ಕ್ಲೌಡ್ ಕಿಚನ್’ ಕಲ್ಪನೆಯಲ್ಲಿ ಪ್ರಾರಂಭವಾಗಿರುವ ಝಾಂಗೋಸ್ ಅಡುಗೆಮನೆಯ ವಿಶೇಷತೆ.
ಹೊಟೇಲ್ ಆಹಾರ ಬೇಡ ಎಂದು ನಿಮಗನಿಸಿದರೆ ಇಲ್ಲಿದೆ ನಿಮಗೆ ಪರಿಹಾರ. ಏಕೆಂದರೆ ಇದು ಹೊಟೇಲ್ ಅಲ್ಲ. ಇದು ಅಪ್ಪಟ ಅಡುಗೆ ಮನೆ ಮಾತ್ರ. ಇಲ್ಲಿ ಗ್ರಾಹಕರು ಕುಳಿತು ಖಾದ್ಯಗಳನ್ನು ತಿನ್ನುವ ವ್ಯವಸ್ಥೆ ಇಲ್ಲ. ಬದಲಿಗೆ, ಗ್ರಾಹಕರು ತಮ್ಮ ಮೊಬೈಲ್ ಮೂಲಕವೋ ಅಥವಾ ಖುದ್ದು ಅಡುಗೆ ಮನೆಗೆ ಭೇಟಿ ನೀಡಿಯೋ ಆರ್ಡರ್ ನೀಡಿದರೆ ಸಾಕು. ಆರ್ಡರ್ ಮಾಡಿದ 50 ನಿಮಿಷಗಳೊಳಗೆ (ಮಂಗಳೂರು ನಗರ ವ್ಯಾಪ್ತಿಯೊಳಗೆ)ಬಿಸಿ ಬಿಸಿ ಹಾಗೂ ಸ್ವಾದಿಷ್ಟಕರ ಖಾದ್ಯಗಳು ಗ್ರಾಹಕರ ಮನೆ ತಲುಪಲಿವೆ.
ದುಬೈನ ಹೊಟೇಲ್ ಉದ್ಯಮದಲ್ಲಿ ಸಮುದ್ರ ಮೀನುಗಳ ನವನವೀನ ಅವಿಷ್ಕಾರದ ಮೂಲಕ ಗ್ರಾಹಕರ ಮನ ಗೆದ್ದಿರುವ ಮಂಗಳೂರು ಮೂಲದ ಯುವಕ ಝಹೀರ್‌ರ ಹೊಸ ಯೋಜನೆ ಇದು. ಮಂಗಳೂರಿನ ಆಹಾರ ಪ್ರಿಯರಿಗೆ ವಿನೂತನ ಶೈಲಿಯಲ್ಲಿ, ತಾವೇ ಅವಿಷ್ಕಾರ ಮಾಡಿದ ಕೋಳಿ ಹಾಗೂ ಸಮುದ್ರ ಮೀನುಗಳ ವಿಶೇಷ ಖಾದ್ಯಗಳನ್ನು ತಯಾರಿಸಿ ಗ್ರಾಹಕರ ಮನೆಗಳಿಗೆ ತಲುಪಿಸುತ್ತಾರೆ. ಕೆಲ ದಿನಗಳ ಹಿಂದಷ್ಟೇ ಈ ‘ಕ್ಲೌಡ್ ಕಿಚನ್’ ಹೆಸರಿನ ಅಡುಗೆಮೆ ಅತ್ತಾವರದಲ್ಲಿ ಆರಂಭಗೊಂಡಿದೆ.
ಕೃತಕ ರುಚಿ ಇಲ್ಲ
ತಮ್ಮ ಯಾವುದೇ ಖಾದ್ಯದಲ್ಲಿ, ಮಾನವ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲ ಅಜಿನೊಮೋಟೋ ಅಥವಾ ಕೃತಕ ಬಣ್ಣಗಳನ್ನು ಉಪಯೋಗಿಸುತ್ತಿಲ್ಲ ಎಂಬ ಭರವಸೆಯನ್ನು ಝಹೀರ್ ಗ್ರಾಹಕರಿಗೆ ನೀಡುತ್ತಾರೆ.
ನವನವೀನ - ವೈವಿಧ್ಯಮಯ ಖಾದ್ಯಗಳು
ಕ್ಲೌಡ್ ಕಿಚನ್‌ನಲ್ಲಿ ಗ್ರಾಹಕರಿಗೆ ಘೀ ರೋಸ್ಟ್, ಶಾಹಿ ರೋಸ್ಟ್, ಪೆಪ್ಪರ್ ರೋಸ್ಟ್, ಮಲಬಾರ್ ರೋಸ್ಟ್, ಲೆಮನ್‌ಗ್ರಾಸ್ ರೋಸ್ಟ್, ಸೌತ್ ರೋಸ್ಟ್, ಪೆರಿ ಪೆರಿ, ಜಿಂಜರ್ ಫ್ಯೂಶನ್ ಟಿಕ್ಕಾ, ಕ್ಲಾಸಿಕ್ ಟಿಕ್ಕಾ ಮೊದಲಾದ ಕೋಳಿ ಮಾಂಸದ ಖಾದ್ಯಗಳ ಜತೆಗೆ, ಸಿಗಡಿ- ಏಡಿ- ಬೊಂಡಾಸ್ ಮೊದಲಾದ ಸಮುದ್ರ ಆಹಾರಳ ಚಿಲ್ಲಿ ರೋಸ್ಟ್ ಕೂಡಾ ಇಲ್ಲಿ ಲಭ್ಯ.
ಏಡಿಯ ಪೆಪ್ಪರ್‌ಲೀಸಿಯಸ್ ಅಲ್ಲದೆ, ಟಿಕ್ಕಾ ಮಸಾಲಾ, ಚೆಟ್ಟಿನಾಡು ಮೊದಲಾದ ಕೋಳಿ ಕರ್ರಿ ಖಾದ್ಯಗಳೂ ಇಲ್ಲಿವೆ. ಇದಲ್ಲದೆ, ಗ್ರೀನ್ ಪೀಸ್ ಕೂರ್ಮ, ಸ್ಪೆಷಲ್ ದಾಲ್, ಪನೀರ್ ಗೀ ರೋಸ್ಟ್, ಮೊಟ್ಟೆ ಗೀ ರೋಸ್ಟ್, ಮೊಟ್ಟೆ ಚೆಟ್ಟಿನಾಡು ಖಾದ್ಯಗಳನ್ನೂ ಇವರು ಗ್ರಾಹಕರಿಗೆ ಒದಗಿಸುತ್ತಾರೆ. ‘‘ಅತ್ಯುತ್ತಮ ದರದಲ್ಲಿ ಮಂಗಳೂರಿಗರು ಆರೋಗ್ಯಭರಿತ ಖಾದ್ಯಗಳನ್ನು ಅಡುಗೆಮನೆಯಿಂದ ನೇರವಾಗಿ ತಮ್ಮ ಮನೆಗಳಲ್ಲಿಯೇ ಕುಟುಂಬ ಸಮೇತರಾಗಿ ಸವಿಯಬಹುದಾಗಿದೆ. ಗ್ರಾಹಕರು ಆರ್ಡರ್ ಮಾಡಿದ ಖಾದ್ಯಗಳನ್ನು ಉಚಿತವಾಗಿ (500 ರೂ. ಮೇಲ್ಪಟ್ಟು) ಮನೆ ಬಾಗಿಲಿಗೆ ತಲುಪಿಸಲಾಗುವುದು. ಈ ಖಾದ್ಯಗಳ ಫ್ರಾಂಚಾಯಿಸಿಗೂ ಅವಕಾಶ ನೀಡಲಾಗುವುದು. ಜುಲೈನಲ್ಲಿ ಮಣಿಪಾಲದಲ್ಲಿ ಹಾಗೂ ಬಳಿಕ ಚೆನ್ನೈನಲ್ಲಿ ಈ ಕ್ಲೌಡ್ ಕಿಚನ್ ಅಡುಗೆಮನೆಯನ್ನು ಆರಂಭಿಸಲಾಗುವುದು’’ ಎಂದು ಝಹೀರ್ ಹೇಳುತ್ತಾರೆ.
ಹೆಚ್ಚಿನ ಮಾಹಿತಿ ಅಥವಾ ಆರ್ಡರ್ ಗಾಗಿ ಕರೆ ಮಾಡಿ: 7204047766 , 7204067766
http://@ zangos.kitchen ಮೂಲಕ ಗ್ರಾಹಕರು ಕ್ಲೌಡ್ ರೋಸ್ಟ್ ಖಾದ್ಯಗಳ ರೆಸಿಪಿಯನ್ನು ತಿಳಿಯಬಹುದು.
‘‘ಜನರಿಗೆ ಆರೋಗ್ಯಭರಿತ ಹಾಗೂ ಸ್ವಾಧಿಷ್ಟಭರಿತ ಖಾದ್ಯಗಳನ್ನು ಒದಗಿಸಬೇಕೆಂಬ ಗುರಿಯೊಂದಿಗೆ ನನ್ನದೇ ಕೆಲ ವಿಶೇಷ ಅವಿಷ್ಕಾರಗಳೊಂದಿಗೆ ಹೊಸ ಪರಿಕಲ್ಪನೆಯಲ್ಲಿ ಈ ಕ್ಲೌಡ್ ಕಿಚನ್’ ಆರಂಭಗೊಂಡಿದೆ. ಕಳೆದ 14 ವರ್ಷಗಳಿಂದ ದುಬೈನಲ್ಲಿ ವಾಚ್ ಉದ್ಯಮದಲ್ಲಿದ್ದ ಸಂದರ್ಭ ನಾಲ್ಕು ವರ್ಷಗಳಿಂದೀಚೆಗೆ ಅಲ್ಲಿನ ಜುಸೈಸ್‌ನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದೇನೆ. ನಾನೇ ಅವಿಷ್ಕಾರ ಮಾಡಿದ ಹಲವು ವಿಶೇಷ ಖಾದ್ಯಗಳಿವೆ . ಕಳೆದ ಆರು ತಿಂಗಳಿನಿಂದ ಈ ಖಾದ್ಯಗಳ ಬಗ್ಗೆ ಸಂಶೋಧನೆ ಮಾಡಿ ಮಂಗಳೂರಿನ ಗ್ರಾಹಕರಿಗೆ ನೀಡಲು ಮುಂದಾಗಿದ್ದೇನೆ’’
- ಝಹೀರ್, ಝಾಂಗೋಸ್ ಕ್ಲೌಡ್ ಕಿಚನ್ ಮುಖ್ಯಸ್ಥರು.