×
Ad

ಉಡುಪಿ: ನವೀಕೃತ ಉದ್ಯಾವರ ಜಾಮೀಯ ಮಸೀದಿ ಉದ್ಘಾಟನೆ

Update: 2017-04-07 21:13 IST

ಉಡುಪಿ, ಎ.7: ಉದ್ಯಾವರ ಪೇಟೆಯ ಸಮೀಪ ನವೀಕೃತಗೊಂಡಿರುವ ಱಸಿದ್ದೀಕ್- ಇ- ಅಕ್ಬರ್‌ೞಜಾಮೀಯ ಮಸೀದಿಯನ್ನು ಶುಕ್ರವಾರ ಕುಂದಾಪುರ ಕಂಡ್ಲೂರಿನ ಝಿಯಾ ಏಜುಕೇಶನ್ ಟ್ರಸ್ಟ್‌ನ ಸ್ಥಾಪಕ ವೌಲಾನ ಉಬೇದುಲ್ಲಾ ನದ್ವಿ ನೇತೃತ್ವದಲ್ಲಿ ಜುಮ್ಮಾ ನಮಾಝ್ ನಿರ್ವಹಿಸುವ ಮೂಲಕ ಉದ್ಘಾಟಿಸ ಲಾಯಿತು.

ಸಂಜೆ ಉದ್ಯಾವರ ಹಲೀಮಾ ಸಾಬ್ಜು ಆಡಿಟೋರಿಯಂನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವೌಲಾನ ಉಬೇದುಲ್ಲಾ ನದ್ವಿ, ಮಸೀದಿಗಳು ಕೇವಲ ನಮಾಝ್‌ಗೆ ಮಾತ್ರ ಸೀಮಿತ ವಾಗಿರದೆ ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳ ಕೇಂದ್ರಗಳಾಗಬೇಕು. ಅಲ್ಲದೆ ಸಮಾಜದಲ್ಲಿ ಶಾಂತಿ ಸ್ಥಾಪಿಸುವವರ ಜೊತೆ ಕೈಜೋಡಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಮಸೀದಿಯ ಗೌರವಾಧ್ಯಕ್ಷ ಹಾಗೂ ಉದ್ಯಾವರ ಹಲೀಮಾ ಸಬ್ಜು ಚಾರಿಟೇಬಲ್ ಟ್ರಸ್ಟ್‌ನ ಮಾಲಕ ಅಲ್‌ಹಾಜ್ ಅಬ್ದುಲ್ ಜಲೀಲ್ ಸಾಹೇಬ್ ವಹಿಸಿದ್ದರು. ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಎಂ.ಎ. ಸಲೀಂ, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಾವರ ಜುಮಾ ಮಸೀದಿಯ ಇಮಾಮ್ ಮೌಲಾನ ಅಬ್ದುಲ್ ರಶೀದ್ ರೆಹಮಾನಿ, ಉದ್ಯಾವರ ಸೈಂಟ್ ಕ್ಸೇವೀಯರ್ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ. ಡಾ.ರಾಖ್ ಡಿಸೋಜ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ಮಲ್ಪೆಯ ಉದ್ಯಮಿ ಎಫ್.ಎಂ. ಯಕೂಬ್ ಖಾನ್, ಮಸೀದಿ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಅಝೀಝ್, ಉದ್ಯಾವರ ಮುಸ್ಲಿಮ್ ಯುನಿಟಿ ಅಧ್ಯಕ್ಷ ಅಫ್ಝಲ್ ರಶೀದ್, ಉದ್ಯಾವರ ಮುಸ್ಲಿಮ್ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ಸಾಹಿಲ್ ಉಪಸ್ಥಿತರಿದ್ದರು.

 ಮಸೀದಿಯ ಪ್ರಧಾನ ಕಾರ್ಯದರ್ಶಿ ಖಾಲಿಕ್ ಹೈದರ್ ಸ್ವಾಗತಿಸಿದರು. ವೌಲಾನ ಮುಹಮ್ಮದ್ ಅಲಿ ಕಿರಾತ್ ಪಠಿಸಿದರು. ಅನ್ಸಾರ್ ಅಝೀಝ್ ವಂದಿಸಿದರು. ಅಬಿದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಂಡ ಈ ಮಸೀದಿ ಯಲ್ಲಿ ಏಕಕಾಲದಲ್ಲಿ ಸುಮಾರು 1000 ಮಂದಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಲಾಗಿದೆ. ಮಹಿಳೆಯರು ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸ ಲಾಗಿದೆ. ಪ್ರಾರ್ಥನೆ ಸಲ್ಲಿಸುವ ಸ್ಥಳವನ್ನು ಮರದ ಕೆತ್ತನೆಯಿಂದ ವಿಶೇಷವಾಗಿ ನಿರ್ಮಿಸಲಾಗಿದ್ದು, ಮಸೀದಿಯ ಮೇಲ್ಭಾಗದಲ್ಲಿ ರಚಿಸಲಾದ ಗೋಲಗಮ್ಮಟ ನೋಡುವರನ್ನು ಆಕರ್ಷಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News