ಆಮೆಗತಿಯಲ್ಲಿ ಸಾಗುತ್ತಿರುವ ‘ಸ್ವಚ್ಛ ಗಂಗೆ’ ಅಭಿಯಾನ
ಹೊಸದಿಲ್ಲಿ, ಎ.7: ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ‘ನಮಾಮಿ ಗಂಗೆ ’ ಅಭಿಯಾನ ಆಮೆಗತಿಯಲ್ಲಿ ಸಾಗುತ್ತಿದ್ದು , 2,525 ಕಿ.ಮೀ. ಉದ್ದದ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯ ನಿಗದಿತ ಗಡುವಾಗಿರುವ 2018ರ ಒಳಗೆ ಪೂರ್ಣಗೊ ಳ್ಳುವ ಬಗ್ಗೆ ಅನುಮಾನ ಮೂಡಿದೆ.
ಈ ಹಿಂದಿದ್ದ ರಾಷ್ಟ್ರೀಯ ಗಂಗಾ ನದಿಪಾತ್ರ ಪ್ರಾಧಿಕಾರ (ಎನ್‌ಜಿಆರ್‌ಬಿಎ)ವನ್ನು ಬರ್ಖಾಸ್ತುಗೊಳಿಸಿ ಅದರ ಸ್ಥಾನದಲ್ಲಿ ಗಂಗಾ ಸ್ವಚ್ಛತೆಗೆ ರಾಷ್ಟ್ರೀಯ ಮಂಡಳಿ(ಎನ್‌ಎಂಸಿಜಿ)ಯನ್ನು ಸ್ಥಾಪಿಸಲಾಗಿತ್ತು. ಆದರೆ ಎನ್‌ಎಂಸಿಜಿ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ಕೈಗೊಳ್ಳಲು ವಿಳಂಬವಾಗಿರುವುದು ಅಭಿಯಾನದ ಆಮೆಗತಿಗೆ ಕಾರಣ ಎನ್ನಲಾಗಿದೆ. ಎನ್‌ಎಂಸಿಜಿಗೆ ಪ್ರಾಧಿಕಾರದ ರೂಪವನ್ನು ಕಳೆದ ವರ್ಷವಷ್ಟೇ ನೀಡಲಾಗಿದೆ. ಪ್ರಾಧಿಕಾರ ಈಗಿನ್ನೂ ಆರಂಭಿಕ ಹಂತದಲ್ಲಿರುವ ಕಾರಣ ಅಭಿಯಾನ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ಜಲಸಂಪನ್ಮೂಲ ಸಚಿಾಲಯದ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಆದರೆ ಗಂಗಾನದಿ ಹರಿಯುತ್ತಿರುವ ಐದು ರಾಜ್ಯಗಳ ಪೈಕಿ ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಅಭಿಯಾನ ಯೋಜಿತ ರೀತಿಯಲ್ಲೇ ಸಾಗುವ ನಿರೀಕ್ಷೆ ಮೂಡಿಸಿದೆ.