ಕೋಟ: 53 ವರ್ಷದ ವ್ಯಕ್ತಿಯಿಂದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಕೋಟ, ಎ.7: ಎಂಟರ ಹರೆಯದ ಬಾಲಕಿಯ ಮೇಲೆ ವ್ಯಕ್ತಿಯೊರ್ವ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬಿದ್ಕಲ್‌ಕಟ್ಟೆ ಎಂಬಲ್ಲಿ ನಡೆದಿದೆ.
ದೌರ್ಜನ್ಯ ಎಸಗಿರುವ ಆರೋಪಿ ರಾಮದಾಸ್ ಪ್ರಭು(53) ಎಂಬಾತನನ್ನು ಕೋಟ ಪೊಲೀಸರು ಬಂಧಿಸಿ, ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಬಿದ್ಕಲ್‌ಕಟ್ಟೆ ಪೇಟೆಯಲ್ಲಿ ಅಂಗಡಿ ಹೊಂದಿದ್ದ ರಾಮದಾಸ್ ಹಾಲು ಮಾರಾಟ ಮಾಡುವ ಕೆಲಸ ನಿರ್ವಹಿಸುತ್ತಿದ್ದನು. ಈತ ಮೂರು ದಿನಗಳ ಹಿಂದೆ ಅಂಗಡಿ ಬಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ನೆಂದು ದೂರಲಾಗಿದೆ. ಅಲ್ಲದೆ ಆತ ಬಾಲಕಿಗೆ ಮನೆಯಲ್ಲಿ ಹೇಳದಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಇದರಿಂದ ಅಸ್ವಸ್ಥಗೊಂಡು ಅನಾರೋಗ್ಯಕ್ಕೀಡಾದ ಬಾಲಕಿಯನ್ನು ಇಂದು ಆಸ್ಪತ್ರೆಗೆ ದಾಖಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಬಾಲಕಿ ಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಮಿಳು ನಾಡು ಮೂಲದ ಈ ಬಾಲಕಿಯ ಕುಟುಂಬ, ಬಿದ್ಕಲ್ಕಟ್ಟೆಯ ಕ್ವಾರೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.