ಎಂಡೋ ಸಂತ್ರಸ್ತರಿಗೆ ಉಚಿತ ಬಸ್‌ಪಾಸ್

Update: 2017-04-07 18:14 GMT

ಮಂಗಳೂರು, ಎ.7: ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿನಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರಿಗೆ ಹಾಗೂ ಅವರ ಜೊತೆ ಪ್ರಯಾಣಿಸುವ ಓರ್ವ ಸಹಾಯಕರಿಗೆ ವೈದ್ಯಕೀಯ ಚಿಕಿತ್ಸೆಗೆ ಪ್ರಯಾಣಿಸುವಾಗ ಸಾರಿಗೆ ಸಂಸ್ಥೆಯ ಸಾಮಾನ್ಯ ಸಾರಿಗೆಯಲ್ಲಿ ಉಚಿತವಾಗಿ ಪ್ರಯಾಣಿಸಲು ಬಸ್ ಪಾಸ್ ವಿತರಿಸಲಾಗುತ್ತಿದೆ.

ಎಂಡೋಸಂತ್ರಸ್ತರು ಅಂಗವಿಕಲ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಚೀಟಿ ಹಾಗೂ ಯಥಾ ಪ್ರತಿ, ವಾಸ್ತವ್ಯ ದೃಢೀಕರಣದ ಬಗ್ಗೆ ದಾಖಲಾತಿ, ಎರಡು ಪಾಸ್‌ಪೋರ್ಟ್ ಅಳತೆಯ ಹಾಗೂ ಒಂದು ಅಂಚಿ ಚೀಟಿ ಗಾತ್ರದ ಭಾವಚಿತ್ರ ಹಾಗೂ ವೈದ್ಯಕೀಯ ಪರೀಕ್ಷೆಗಳ ವರದಿ ಮತ್ತು ಕಂದಾಯ ಇಲಾಖೆಯಿಂದ ಒದಗಿಸಿದ ಮಂಜೂರಾತಿ ಆದೇಶದ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿ ಶಿಬಿರದಲ್ಲಿ ಬಸ್‌ಪಾಸ್ ಪಡೆಯಬಹುದು.

ಶಿಬಿರ ನಡೆಯುವ ಸ್ಥಳಗಳು: ಎ.11ರಂದು ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಎ.13 ಕೊಕ್ಕಡ ಎಂಡೋ ಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರ, ಎ.15ರಂದು ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಎ.18ರಂದು ಕೊಯ್ಲ ಗ್ರಾಪಂ ಕಚೇರಿ, ಎ.20ರಂದು ಬೆಳ್ಳಾರೆ ಕೆಎಸ್ಸಾರ್ಟಿಸಿ ಸಂಚಾರಿ ನಿಯಂತ್ರಣ ಕೇಂದ್ರದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಶಿಬಿರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News