×
Ad

ಸ್ವೀಡನ್ ನಲ್ಲಿ ಭಾರತೀಯರು ಸುರಕ್ಷಿತ: ಸಚಿವೆ ಸುಷ್ಮಾ

Update: 2017-04-08 10:02 IST

ಸ್ಟಾಕ್ ಹೋಮ್ , ಎ.8: ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್ ನಲ್ಲಿ ಉಗ್ರರ ದಾಳಿತಿಂದಾಗಿ ಭಾರತೀಯರಿಗೆ ತೊಂದರೆಯಾಗಿಲ್ಲ. ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸುರಕ್ಷಿತರಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಸ್ಪಷ್ಟಪಡಿಸಿದ್ದಾರೆ.
 ಸ್ಟಾಕ್ ಹೋಮ್ ನ ಕ್ವೀನ್ಸ್ ಸ್ಟ್ರೀಟ್‌ನ  ಭಾರತೀಯ ರಾಯಭಾರಿ ಕಚೇರಿ ಪಕ್ಕದಲ್ಲೇ ಶುಕ್ರವಾರ ಉಗ್ರನೊಬ್ಬ ಟ್ರಕ್‌ ಹರಿಸಿ ನಡೆಸಿದ ದಾಳಿಯಲ್ಲಿ ಪರಿಣಾಮ 4 ಮಂದಿ ಮೃತಪಟ್ಟಿದ್ದರು. ಹಾಗೂ  15 ಮಂದಿಗೆ ಗಂಭೀರ ಗಾಯವಾಗಿತ್ತು. 
 ಸ್ವೀಡನ್ ರಾಯಭಾರ ಕಚೇರಿಯೊಂದಿಗೆ   ಸಂಪರ್ಕ ಸಾಧಿಸಿ ಈ ಬಗ್ಗೆ  ಮಾಹಿತಿ ಪಡೆಯಲಾಗಿದೆ ಎಂದು  ಎಂದು ಸಚಿವೆ ಸುಷ್ಮಾ ಸ್ವರಾಜ್‌  ಹೇಳಿದ್ದಾರೆ .
ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News