ಸ್ನೇಹ ಸಮ್ಮರ್ ಶೈನ್ ಬೇಸಿಗೆ ಶಿಬಿರಕ್ಕೆ ಚಾಲನೆ
ಮಂಗಳೂರು, ಎ.8: ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸ್ನೇಹ ಸಮ್ಮರ್ ಶೈನ್ ಬೇಸಿಗೆ ಶಿಬಿರಕ್ಕೆ ಇತ್ತೀಚೆಗೆ ಚಾಲನೆ ದೊರೆಯಿತು.
ಶಿಬಿರಕ್ಕೆ ಚಾಲನೆ ನೀಡಿದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ರಫೀಕ್ ಮಾಸ್ಟರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಧನೆಯ ಛಲ ಇರಬೇಕು. ಆಗ ಮಾತ್ರ ಜಗತ್ತು ನಮ್ಮನ್ನು ಗುರುತಿಸುತ್ತದೆ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಅನುಪಮಾ ಮಹಿಳಾ ಮಾಸಿಕದ ಹಿರಿಯ ಉಪಸಂಪಾದಕಿ ಸಾಜಿದಾ ಮೂಮಿನ್ ಆರೋಗ್ಯ ಮತ್ತು ಬದುಕು ಎಂಬ ವಿಷಯದಲ್ಲಿ ಮಾತನಾಡಿದರು. ಜುನೈದಾ ಸುಲ್ತಾನ ಭಾಷೆಯ ಬಗ್ಗೆ ವಿವರಿಸಿದರು. ಹಸೀಬ್ ಉಪ್ಪಿನಂಗಡಿ ಅರಬಿ ಭಾಷಾ ಮಾಹಿತಿ ನೀಡಿದರು.
ಶಾಲಾ ಅಧ್ಯಕ್ಷಯೂಸುಫ್ ಪಕ್ಕಲಡ್ಕ ಮತ್ತು ನಾಗರತ್ನಾ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಶಿಕ್ಷಕಿ ಫೌಝಿಯಾ ಕಾರ್ಯಕ್ರಮ ನಿರೂಪಿಸಿದರು. ನುಶ್ರತ್ ಕುರೇಶ್ ಸ್ವಾಗತಿಸಿದರು. ಸಮ್ಹಾ ಜುವೈರಿಯಾ ವಂದಿಸಿದರು.
ವಿದ್ಯಾರ್ಥಿ ಶಾಹಿಲ್ ಕಿರಾಅತ್ ಪಠಿಸಿದರು. ಶಿಬಿರದ ಸಂಚಾಲಕ ಅಶೀರುದ್ದೀನ್ ಉಪಸ್ಥಿತರಿದ್ದರು.