×
Ad

ಅಳದಂಗಡಿಯಲ್ಲಿ ವಿದ್ಯುತ್ ಆಘಾತದಿಂದ ಓರ್ವ ಮೃತ್ಯು

Update: 2017-04-08 15:49 IST

ಬೆಳ್ತಂಗಡಿ, ಎ.8: ಮರದ ಕೊಂಬೆಯನ್ನು ಕಡಿಯುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೊಳಗಾಗಿ ವ್ಯಕ್ಯಿಯೋರ್ವ ಮೃತಪಟ್ಟ ಘಟನೆ ಅಳದಗಂಡಿಯಲ್ಲಿ ಇಂದು ನಡೆದಿದೆ.

ಮೃತರನ್ನು ಅಳದಂಗಡಿ ಕಂಬಳದಡ್ದ ಬರಮೇಲು ನಿವಾಸಿ ಬಾಬು ಮಡಿವಾಳ(55) ಗುರುತಿಸಲಾಗಿದೆ.
ವಿದ್ಯುತ್ ತಂತಿಗೆ ತಾಗುತ್ತಿದ್ದ ಮರದ ಕೊಂಬೆಯನ್ನು ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತಂತಿ ಸ್ಪರ್ಶಕ್ಕೊಳಗಾದ ಮರದಲ್ಲಿ ಪ್ರವಹಿಸಿದೆ. ಈ ವೇಳೆ ಮರದಲ್ಲಿದ್ದ ಬಾಬು ಅವರು ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದರೆನ್ನಲಾಗಿದೆ.

ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News