ಕೆ.ಪಿ ಟ್ರಸ್ಟ್(ರಿ) ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
Update: 2017-04-08 17:51 IST
ಕಲ್ಲಡ್ಕ, ಎ.8: ಕೆ.ಪಿ ಟ್ರಸ್ಟ್ ಕಲ್ಲಡ್ಕ ವತಿಯಿಂದ ಕಲ್ಲಡ್ಕ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ವಠಾರದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದ ಅನಿವಾಸಿ ಭಾರತೀಯ ಉದ್ಯಮಿ ಆಸಿಫ್ ಕತರ್ ಶುಚಿತ್ವ ಇಮಾನಿನ ಭಾಗವಾಗಿದೆ. ಪ್ರವಾದಿ(ಸ.ಅ) ಶುಚಿತ್ವಕ್ಕೆ ಹೆಚ್ಚಿನ ಮಹತ್ವವವನ್ನು ನೀಡಿರುತ್ತಾರೆ. ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಅಭಿಯಾನದ ಮೂಲಕ ಸ್ವಚ್ಛತೆ ಕಾಯ್ದುಕೊಳ್ಳುವಂತೆ ನಾಗರೀಕರಲ್ಲಿ ವಿನಂತಿಸಿಕೊಳ್ಳುತ್ತಿದೆ. ನಮ್ಮ ಸುತ್ತಮುತ್ತಲು ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಐಎನ್ ಬಾಯ್ಸಾ ತಂಡದ ನಾಯಕ ನಜಿಮೀರ್, ಜುನೈದ್ ಕೆ.ಪಿ, ಫಾರೂಕ್ ಐಎನ್, ಅಶ್ರಫ್ ಜೆಮ್, ಮುಸ್ತಾಕ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.