ಕಾಟಿಪಳ್ಳ ಜುಮಾ ಮಸೀದಿಗೆ ಬೀರ್ ಬಾಟಲಿ ಎಸೆತ
Update: 2017-04-08 18:02 IST
ಮಂಗಳೂರು, ಎ.8: ಯಾರೋ ಕಿಡಿಗೇಡಿಗಳು ಮಸೀದಿಗೆ ಬೀರ್ ಬಾಟ್ಲಿಗಳನ್ನು ಎಸೆದಿರುವ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಕಾಟಿಪಳ್ಳ ಜಂಕ್ಷನ್‌ನಲ್ಲಿರುವ ಪಣಂಬೂರು ಮುಸ್ಲಿಂ ಜಮಾಅತ್ ಮೊದಿನ್ ಜುಮಾ ಮಸೀದಿಗೆ ಕಿಡಿಗೇಡಿಗಳು ಬೀರ್ ಬಾಟಲಿಗಳನ್ನು ಎಸೆದಿದ್ದು, ಬೆಳಗ್ಗೆ ನಮಾಝಿನ ಬಂದಾಗ ಬೆಳಕಿಗೆ ಬಂದಿದೆ.
ಮಸೀದಿ ಆವರಣದೊಳಗೆ ಬಾಟಲಿಗಳು ಒಡೆದು ಚೂರುಗಳಾಗಿ ಬಿದ್ದಿತ್ತು. ಮಸೀದಿಗೆ ಯಾವುದೇ ಹಾನಿಯಾಗಿಲ್ಲ. ಬಾಟಲಿ ಎಸೆದಿರುವ ಕಿಡಿಗೇಡಿಗಳು ಉದ್ದೇಶ ಗೊತ್ತಿಲ್ಲ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ಮಸೀದಿ ಸಮಿತಿಯ ಅಧ್ಯಕ್ಷ ತಮೀಮ್‌ತಿಳಿಸಿದ್ದಾರೆ.