ಚೆನ್ನೈ ನಿವಾಸದಲ್ಲಿ ಅಗ್ನಿ ಅವಘಡ,ಪಾರಾದ ನಟ ಕಮಲ್ ಹಾಸನ್
Update: 2017-04-08 18:56 IST
ಚೆನ್ನೈ,ಎ.8: ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಇಲ್ಲಿಯ ಈಸ್ಟ್ ಕೋಸ್ಟ್ ರೋಡ್ ನಿವಾಸದಲ್ಲಿ ಶುಕ್ರವಾರ ಮಧ್ಯರಾತ್ರಿಯ ಸುಮಾರಿಗೆ ಸಣ್ಣ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ. ತಾನು ಕ್ಷೇಮವಾಗಿದ್ದು, ಇತರ ಯಾರೂ ಗಾಯಗೊಂಡಿಲ್ಲ ಎಂದು ಕಮಲ್ ಟ್ವಿಟರ್ ಮೂಲಕ ದೃಢಪಡಿಸಿದ್ದಾರೆ.
ನೆಲಅಂತಸ್ತಿನಲ್ಲಿ ರೆಫ್ರಿಜರೇಟರ್‌ವೊಂದು ಇದ್ದು,ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದೆಂಂದು ಶಂಕಿಸಲಾಗಿದೆ ಎಂದು ಅವರ ಕಚೇರಿಯು ತಿಳಿಸಿದೆ.ಆದರೆ ಅಗ್ನಿ ಅವಘಡ ಕಮಲ್ ನೆರೆಮನೆಯಲ್ಲಿ ಸಂಭವಿಸಿತ್ತು ಎಂದು ಅಗ್ನಿಶಾಮಕ ದಳದ ಕಚೇರಿಯು ಹೇಳಿದೆ.