×
Ad

ಕೊರಗರ ಭೂಮಿ ಅತಿಕ್ರಮಣ: ಕ್ವಾರೆ ಮಾಲಕರಿಗೆ ಬಿಸಿ ಮುಟ್ಟಿಸಿದ ತಹಶೀಲ್ದಾರ್

Update: 2017-04-08 21:37 IST

ಮೂಡುಬಿದಿರೆ, ಎ.7: ಪುತ್ತಿಗೆ ಗ್ರಾಮದ ಕೊಡ್ಯಡ್ಕ ಬಂಕಿಮಜಲು ಎಂಬಲ್ಲಿ ಕೊರಗರಿಗೆ ಮಂಜೂರಾದ ಭೂಮಿಯಲ್ಲಿ ಅಕ್ರಮವಾಗಿ ಕೆಂಪುಕಲ್ಲು ಕ್ವಾರೆ ನಡೆಸುತ್ತಿರುವ ಬಗ್ಗೆ ಮಾಧ್ಯಮ ವರದಿಯನ್ನು ಗಮನಿಸಿದ ಮೂಡುಬಿದಿರೆ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಕಂದಾಯ ಅಕಾರಿಗಳು ಹಾಗೂ ಸರ್ವೇಯರ್‌ರನ್ನು ಜೊತೆಗೆ ಕರೆದೊಯ್ದಿದ್ದ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಕೊರಗರಿಗೆಂದು ನೀಡಲಾಗಿದ್ದ ಜಾಗದಲ್ಲಿ ಪರಿಶೀಲನೆ ನಡೆಸಿದ್ದು, ಸರ್ವೇಯರ್ ಮೂಲಕ ಜಾಗದ ಗಡಿಗುರುತುಗಳನ್ನು ಗುರುತಿಸಿ ಅಳತೆ ಮಾಡಿಸಿದರು. ದೂರುದಾರ ಕೊರಗರ ಕುಟುಂಬಕ್ಕೆ ನೀಡಲಾಗಿದ್ದ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರಿಂದ ಅತಿಕ್ರಮಣ ನಡೆದಿರುವುದು ಪತ್ತೆಯಾಗಿದ್ದು  ತಹಶೀಲ್ದಾರ್ ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಕೊರಗರ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವ ಬಗ್ಗೆ ಗಣಿ ಮಾಲಕರಲ್ಲಿ ಪ್ರಶ್ನಿಸಿದಾಗ "ತಮ್ಮಿಂದ ತಪ್ಪಾಗಿದೆ. ಗಡಿ ಗುರುತಿನ ಅರಿವಿಲ್ಲದೆ ಈ ಘಟನೆ ನಡೆದಿದೆ" ಎಂದು ಉತ್ತರಿಸಿದ್ದಾರೆ. ಅತಿಕ್ರಮಣಗೊಂಡಿರುವ ಜಾಗವನ್ನು ಕೊರಗರ ಸುಪರ್ದಿಗೆ ತಕ್ಷಣದಿಂದಲೇ ಬಿಟ್ಟುಕೊಡುವಂತೆ ಕ್ವಾರೆ ಮಾಲಕರಿಗೆ ತಹಶೀಲ್ದಾರ್  ಸೂಚನೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News