×
Ad

ಬೆಂಗಳೂರು-ಮಂಗಳೂರು ರಾ. ಹೆದ್ದಾರಿಯಲ್ಲಿ ಲಾರಿ ಚಾಲಕನಿಗೆ ಇರಿದು ದರೋಡೆ

Update: 2017-04-09 10:57 IST

ಉಪ್ಪಿನಂಗಡಿ, ಎ.9: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಕೃತ್ಯ ಮುಂದುವರಿದಿದ್ದು, ಲಾರಿ ಚಾಲಕನೊಬ್ಬನಿಗೆ ಚೂರಿಯಿಂದ ಇರಿದು 15 ಸಾವಿರ ರೂ. ದರೋಡೆಗೈದ ಘಟನೆ ವರದಿಯಾಗಿದೆ.

ನೆಲ್ಯಾಡಿ ಗುಂಡ್ಯ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಕೃತ್ಯ ನಡೆದಿದೆ. ಸಿಮೆಂಟ್ ಸಾಗಾಟದ ಲಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಅದರ ಚಾಲಕನಿಗೆ ಇರಿದು ಆತನಲ್ಲಿದ್ದ ಸುಮಾರು 15 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಮೂರು ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಎರಡನೆ ದರೋಡೆ ಪ್ರಕರಣ ಇದಾಗಿದೆ. ಎಪ್ರಿಲ್ ಆರರಂದು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗಡಿಯ ಬಳಿ ಲಾರಿಯೊಂದನ್ನು ಅಡ್ಡಗಟ್ಟಿದ ದರೋಡೆಕೋರರು ಅದರಲ್ಲಿದ್ದವರನ್ನು ಬೆದರಿಸಿ ಲಕ್ಷಾಂತರ ರೂ. ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ದೋಚಿ ಪರಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News