'ಪಾಮ್ ಸಂಡೆ'ಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭ
Update: 2017-04-09 11:28 IST
ಮಂಗಳೂರು, ಎ.9: 'ಗರಿಗಳ ರವಿವಾರ' (ಪಾಮ್ ಸಂಡೆ) ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಇಂದು ಆರಂಭಗೊಂಡಿದೆ. ಯೇಸುಕ್ರಿಸ್ತರು ಜೆರುಸಲೆಂಗೆ ಪ್ರವೆಶಿಸಿಸುವ ಸಂದರ್ಭದಲ್ಲಿ ಭಕ್ತರು 'ಒಲಿವ್ ' ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಇಂದು ಕರಾವಳಿಯಾದ್ಯಂತ ಕ್ರೈಸ್ತರು ವಿಶೇಷ ಬಲಿ ಪೂಜೆಯಲ್ಲಿ ಪಾಲ್ಗೊಂಡರು.
ಪೂಜೆಗೆ ಮೊದಲು ತೆಂಗಿನ ಗರಿಗಳನ್ನು ಚರ್ಚ್ ಆವರಣದಲ್ಲಿ ತಂದು ಆಶೀರ್ವದಿಸಲ್ಪಟ್ಟ ಬಳಿಕ ಅವುಗಳನ್ನು ಹಿಡಿದುಕೊಂಡು ಮೆರವಣಿಗೆಯ ಮೂಲಕ ತಮ್ಮ ಚರ್ಚ್‌ಗಳಿಗೆ ತೆರಳಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಗುರುವಾರ ಯೇಸುಕ್ರಿಸ್ತರ ಕೊನೆಯ ಭೋಜನದ ದಿನ, ಶುಕ್ರವಾರ ಯೇಸು ಕ್ರಿಸ್ತರು ಶಿಲುಬೆಗೇರಿಸಿದ ದಿನ, ಶನಿವಾರ ರಾತ್ರಿ ಜಾಗರಣೆ ಮತ್ತು ರವಿವಾರ ಯೇಸುಕ್ರಿಸ್ತರ ಪುನಾರುತ್ಥಾನದ ಹಬ್ಬವನ್ನು ಆಚರಿಸಲಾಗುತ್ತದೆ.