ಈಜಿಪ್ಟ್: ಚರ್ಚ್‌ನಲ್ಲಿ ಬಾಂಬ್ ಸ್ಫೋಟ
Update: 2017-04-09 19:58 IST
ಟಾಂಟ(ಈಜಿಪ್ಟ್), ಎ.9: ಈಜಿಪ್ಟ್‌ನ ಟಾಂಟ ನಗರದ ಚರ್ಚ್‌ನಲ್ಲಿ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಕನಿಷ್ಟ 21 ಮಂದಿ ಸಾವಿಗೀಡಾಗಿದ್ದು ಇತರ 40 ಮಂದಿ ಗಾಯಗೊಂಡಿದ್ದಾರೆ . ಕೈರೋದಿಂದ ಸುಮಾರು 120 ಕಿ.ಮೀ. ದೂರದಲ್ಲಿರುವ ಟಾಂಟದ ಮಾರ್ ಗೆರ್ಜಸ್ ಕಾಪ್ಟಿಕ್ ಚರ್ಚ್‌ನಲ್ಲಿ ಸಂಭವಿಸಿದ ಈ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಂಭವವಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರೈಸ್ತ ಧರ್ಮೀಯರ ಪವಿತ್ರ ದಿನವಾಗಿರುವ ಪಾಮ್ ಸಂಡೆ(ಗರಿಗಳ ಭಾನುವಾರ) ಪ್ರಯುಕ್ತ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತಿತ್ತು . ಈ ಸಂದರ್ಭ ಓರ್ವ ಅಪರಿಚಿತ ವ್ಯಕ್ತಿ ಚರ್ಚ್ ಒಳಗೆ ಬಾಂಬ್ ಇಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈಜಿಪ್ಟ್‌ನಲ್ಲಿ ಅಲ್ಪಸಂಖ್ಯಾತರಾಗಿರುವ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡಿರುವ ಮುಸ್ಲಿಂ ಭಯೋತ್ಪಾದಕರು ಈ ದಾಳಿ ಎಸಗಿರುವರೆಂದು ಶಂಕಿಸಲಾಗಿದೆ.