×
Ad

ಶಿವಮೊಗ್ಗ: ಉಡುಪಿ ಭೂಮಾಪಕರ ತಂಡಕ್ಕೆ ರಾಜ್ಯ ಪ್ರಶಸ್ತಿ

Update: 2017-04-09 21:47 IST

ಉಡುಪಿ, ಎ.9: ರಾಷ್ಟ್ರೀಯ ಭೂಮಾಪನ ದಿನಾಚರಣೆಯ ಅಂಗವಾಗಿ ಶಿವಮೊಗ್ಗದಲ್ಲಿ ನಡೆದಿರುವ ರಾಜ್ಯ ಭೂಮಾಪಕರ ಕ್ರೀಡಾಕೂಟದಲ್ಲಿ ಉಡುಪಿ ಭೂಮಾಪಕರ ತಂಡ ಇಂದು ನಡೆದ ಕ್ರಿಕೆಟ್ ಸ್ಪರ್ಧೆಯಲ್ಲಿ ಜಯಗಳಿಸಿ ರಾಜ್ಯ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಕುಂದಾಪುರ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕ ರವೀಂದ್ರ ನೇತೃತ್ವದ ಉಡುಪಿ ಜಿಲ್ಲಾ ತಂಡ, ರವಿವಾರ ಸಂಜೆ ನಡೆದ ಫೈನಲ್‌ನಲ್ಲಿ ಬಳ್ಳಾರಿ ತಂಡವನ್ನು ಏಳು ವಿಕೆಟ್‌ಗಳ ಅಂತರದಿಂದ ಪರಾಭವಗೊಳಿಸಿತು.

ಇದಕ್ಕೆ ಮೊದಲು ನಡೆದ ಪಂದ್ಯಗಳಲ್ಲಿ ಉಡುಪಿ ತಂಡ, ಕೊಡಗು, ದಕ್ಷಿಣ ಕನ್ನಡ, ಹಾಸನ, ಬಾಗಲಕೋಟೆ ತಂಡಗಳನ್ನು ಸೋಲಿಸಿ ಫೈನಲ್‌ಗೇರಿತ್ತು.ರಾಷ್ಟ್ರೀಯ ಭೂಮಾಪನ ದಿನಾಚರಣೆ ನಾಳೆ ಶಿವಮೊಗ್ಗದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News