×
Ad

ದಿಲ್ಲಿ-ಪಾಟ್ನಾ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ದರೋಡೆ

Update: 2017-04-09 22:31 IST

ಪಾಟ್ನಾ, ಎ.9: ದಿಲ್ಲಿ-ಪಾಟ್ನಾ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರನ್ನು ದೋಚಿದ ಘಟನೆ ನಡೆದಿದೆ. ಎ4, ಬಿ1, ಬಿ2 ಬೋಗಿಗಳಲ್ಲಿ ಕೋಚ್ ಅಟೆಂಡೆಂಟ್‌ನ ನೆರವಿನಲ್ಲಿ ದರೋಡೆ ಆಗಿದೆ ಎಂದು ಸಂತ್ರಸ್ತ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಯಾಣಿಕರ ದೂರಿನ ಆಧಾರದಲ್ಲಿ ಕೋಚ್ ಅಟೆಂಡೆಂಟ್‌ನನ್ನು ರವಿವಾರ ಬೆಳಗ್ಗೆ ಪಾಟ್ನಾದಲ್ಲಿ ರೈಲ್ವೆ ಪೊಲೀಸರು ವಶಕ್ಕೆ ಪಡೆ ದಿದ್ದಾರೆ. ಪ್ರಯಾಣಿಕರಿಗೆ ಹಲ್ಲೆ ನಡೆಸಿ ಬೆಲೆಬಾಳುವ ವಸ್ತುಗಳನ್ನು ದರೋಡೆಕೋರರು ಅಪಹರಿಸಿದ್ದಾರೆ. ರೈಲಿನಲಿದ್ದ ಎಎಸ್ಸೈಯನ್ನು ಇಲಾಖಾ ತನಿಖೆ ನಡೆಸುವ ಸಲುವಾಗಿ ಅಮಾನತುಗೊಳಿಸಲಾಗಿದೆ. ಬಿಹಾರ ಪೊಲೀಸರಿಗೆ ನೆರವಾಗಲು ರೈಲ್ವೆ ಸಚಿವ ಸುರೇಶ್ ಪ್ರಭು ಸಂಬಂಧಿಸಿದವರಿಗೆ ನಿರ್ದೇಶ ನೀಡಿದ್ದಾರೆ. ಘಟನೆಯ ಕುರಿತು ತನಿಖೆ ಆರಂಭವಾಗಿದ್ದು, ಈವರೆಗೆ ಅಟೆಂಡೆಂಟ್‌ನನ್ನು ವಶಕ್ಕೆ ಪಡೆದುದು ಹೊರತು ಪಡಿಸಿ ಬೇರೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News