ತರಬೇತಿ ಶಿಬಿರ, ಜಲದಿನ ಕ್ಯಾಂಪ್
ದೇರಳಕಟ್ಟೆ, ಎ.9: ಸಮಸ್ತದ ಅಧೀನದಲ್ಲಿರುವ ಮದ್ರಸ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಫರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ನೀರಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಎಸ್‌ಕೆಎಸ್‌ಬಿವಿ ವತಿಯಿಂದ ದೇರಳಕಟ್ಟೆ ಕೇಂದ್ರ ಮದ್ರಸದಲ್ಲಿ ಜಲದಿನ ಕ್ಯಾಂಪ್ ನಡೆಯಿತು.
ಮುಫತ್ತಿಶ್ ಅಬ್ದುಲ್ಲ ಫೈಝಿ ಆದೂರು ದುಆ ನೆರವೇರಿಸಿದರು. ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ ಅಧ್ಯಕ್ಷತೆ ವಹಿಸಿದ್ದರು. ಅಬ್ದುರ್ರಝಾಕ್ ಅಝ್ಹರಿ ಮಲಾರ್ ಉದ್ಘಾಟಿಸಿದರು. ಯಾಸಿರ್ ಅರಾಫತ್ ಕೌಸರಿ ಪನೀರು ತರಗತಿ ನಡೆಸಿಕೊಟ್ಟರು.
ರೇಂಜ್ ಎಸ್‌ಬಿವಿ ಸಂಚಾಲಕ ಹೈದರ್ ಅಲೀ ಮಿಸ್ಬಾಹಿ, ರೇಂಜ್ ಕೋಶಾಧಿಕಾರಿ ಅಬ್ದುರ್ರಹ್ಮಾನ್ ಹಾಜಿ ಪನೀರು, ಹಂಝ ದಾರಿಮಿ ಗ್ರಾಮಚಾವಡಿ, ಇರ್ಫಾನ್ ಮೌಲವಿ ಮಲಾರ್,ಅಬೂಬಕರ್ ದಾರಿಮಿ ಉರುಮಣೆ, ಶರೀಫ್ ದಾರಿಮಿ ಬೆಳ್ಮ, ಉಮರ್ ದಾರಿಮಿ ಪರ್ತಿಪಾಡಿ, ಸುಲೈಮಾನ್ ಹನೀಫಿ ಕಿನ್ಯ ಉಪಸ್ಥಿತರಿದ್ದರು.
ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ದೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಅಲೀಂ ಅರ್ಶದಿ ವಂದಿಸಿದರು.
ರೇಂಜ್ ಕಾರ್ಯದರ್ಶಿ ಫಾರೂಖ್ ದಾರಿಮಿ ಗ್ರಾಮ ಚಾವಡಿ ಸ್ವಾಗತಿಸಿದರು.