×
Ad

ಇರಾ: ಸಂಪಿಲದಲ್ಲಿ ಅನುಸ್ಮರಣೆ, ಮಿತ್ತಬೈಲ್ ಉಸ್ತಾದ್‌ಗೆ ಸನ್ಮಾನ ಸಮಾರಂಭ

Update: 2017-04-10 19:47 IST

ಇರಾ: ಸಂಪಿಲದಲ್ಲಿ ಅನುಸ್ಮರಣೆ, ಮಿತ್ತಬೈಲ್ ಉಸ್ತಾದ್‌ಗೆ ಸನ್ಮಾನ ಸಮಾರಂಭ
ಕೊಣಾಜೆ,ಎ.10 : ಧಾರ್ಮಿಕ ಅರಿವು ಹಿಂದಿನಿಂದಲೇ ನಡೆಯುತ್ತಿದ್ದರೂ ಮದರಸ ಶಿಕ್ಷಣದಿಂದ ಮಕ್ಕಳು ಸುಸೂತ್ರವಾಗಿ ಧಾರ್ಮಿಕ ಜ್ಞ್ಞಾನ ಪಡೆಯುಂತೆ ಮಾಡಿದ ಕೀರ್ತಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ಗೆ ಸಲ್ಲುತ್ತದೆ ಎಂದು ಪಾತೂರು ಕಜೆ ಎಕೆಎಂ ಅಕಾಡಮಿ ಮುಖ್ಯಸ್ಥ ಇ.ಕೆ.ಎಂ ಶರೀಫ್ ಮುಸ್ಲಿಯಾರ್ ಹೇಳಿದರು.
ಇರಾ ಸಂಪಿಲ ಸಂಶುಲ್ ಉಲಮಾ ಕ್ರಿಯಾ ಸಮಿತಿಯ ತೃತೀಯ ವಾರ್ಷಿಕೋತ್ಸವ ಹಾಗೂ ಅನುಸ್ಮರಣಾ ಸಂಪಿಲ ಸಂಶುಲ್ ಉಲಮಾ ನಗರದಲ್ಲಿ ಭಾನುವಾರ ನಡೆದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಾಸರಗೋಡು ಮಸೀದಿಯ ಖತೀಬ್ ಝುಬೈರ್ ಫೈಝಿ ಅಂಕೋಲ ಮಾತನಾಡಿದರು.ಈ ವೇಳೆ ಶೈಖುನಾ ಮಿತ್ತಬೈಲ್ ಉಸ್ತಾದ್ ಅವರನ್ನು ಸನ್ಮಾನಿಸಲಾಯಿತು. ಶೈಖುನಾ ಅಲ್ಹಾಜ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ದುವಾ ನೆರವೇರಿಸಿದರು. ಅಸ್ಸಯ್ಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು. ಸಜಿಪ ಕೇಂದ್ರ ಜುಮಾ ಮಸೀದಿಯ ಅಶ್ಫಕ್ ಫೈಝಿ ಅನುಸ್ಮರಣಾ ಭಾಷಣ ಮಾಡಿದರು. ಅಸ್ಲಂ ಅಝ್‌ಹರಿ ಕಣ್ಣೂರು ಮುಖ್ಯ ಭಾಷಣ ಮಾಡಿದರು. ಸಮಸ್ತ ಮುಫತ್ತಿಶ್ ಹನೀಫ್ ಮುಸ್ಲಿಯಾರ್, ಅಬ್ದುಲ್ಲಾ ಮುಸ್ಲಿಯಾರ್ ಪರಪ್ಪು, ಇಬ್ರಾಹೀಂ ಮುಸ್ಲಿಯಾರ್ ಪಾತೂರು, ಹುಸೈನ್ ಮುಸ್ಲಿಯಾರ್, ಅಬ್ದುಲ್ ಅಝೀಝ್ ಸಾಂಬಾರ್‌ತೋಟ, ಎಚ್.ಇಬ್ರಾಹೀಂ ಮುಸ್ಲಿಯಾರ್, ಎಸ್‌ಕೆಐಎಂವಿಬಿ ಮದ್ರಸ ಬೋರ್ಡ್ ಸದಸ್ಯರಾದ ಇಸ್ಮಾಯೀಲ್ ಗೋಳ್ತಮಜಲು, ಅಬೂಬಕರ್ ಗೋಳ್ತಮಜಲು, ಕೆ.ಎಂ.ಮೂಸಾ ಚೇರೂರು, ಸಂಪಿಲ ಸಂಶುಲ್ ಉಲಮಾ ಕ್ರಿಯಾ ಸಮಿತಿಯ ಗೌರವಾಧ್ಯಕ್ಷ ಟಿ.ಇಬ್ರಾಹೀಂ ಮತ್ತಿತರರು ಉಪಸ್ಥಿತರಿದ್ದರು. ಮದರಸ ವಿದ್ಯಾರ್ಥಿ ಮಹಮ್ಮದ್ ಶಾಹಿದ್ ಕಿರಾಅತ್ ಪಠಿಸಿದರು. ಎನ್.ಎ.ಅಬ್ದುಲ್ ಖಾದರ್ ಯಮಾನಿ ಪೊಯ್ಯತ್ತಬೈಲ್ ಸ್ವಾಗತಿಸಿದರು. ನಝೀರ್ ಅಹ್ಮದ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News