ಲೀಲಾಧರ ಶೆಟ್ಟಿ, ವಿಠಲ್ ಕುಂದರ್‌ಗೆ ಸನ್ಮಾನ
Update: 2017-04-10 21:13 IST
ಉಡುಪಿ, ಎ.10: ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಹನ್ನೊಂದನೇ ವರ್ಷದ ಹನುಮಜ್ಜಯಂತಿ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕಾಪು ಲೀಲಾಧರ್ ಶೆಟ್ಟಿ ಹಾಗೂ ವಿಠ್ಠಲ ಕುಂದರ್ ರನ್ನು ಸನ್ಮಾನಿಸಲಾಯಿತು. ಪೇಜಾವರ ಶ್ರೀಗಳು ಆಶೀರ್ವಚನ ನೀಡಿ ಹನುಮಂತನಿಗೆ ಭಗವಂತನ ಮೇಲೆ ಭಕ್ತಿ ಹಾಗೂ ಶಕ್ತಿ ಇದ್ದು ದೊಡ್ಡ ಸಾಧಕನಾಗಿದ್ದಾನೆ. ಹನುಮಜ್ಜಯಂತಿಯ ಈ ಸಂದರ್ಭದಲ್ಲಿ ಸಾಧಕರಾಗಿರುವವರಿಗೆ ಸನ್ಮಾನ ಮಾಡಿದ್ದು ಸಾರ್ಥಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್, ಜಿತೇಶ್ ಕಿದಿಯೂರು, ಗೋಪಾಲ್ ಕುಂದರ್ ಉಪಸ್ಥಿತರಿದ್ದರು. ಪ್ರೊ.ಎಂ.ಎಲ್ .ಸಾಮಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಭುವನ ಪ್ರಸಾದ್ ಸನ್ಮಾನ ಪತ್ರವನ್ನು ವಾಚಿಸಿದರು.