×
Ad

ಸೌಹಾರ್ದ ಸಮಾಜದ ನಿರ್ಮಾಣ ಅಗತ್ಯ: ತ್ವಾಖಾ ಅಹ್ಮದ್ ಮುಸ್ಲಿಯಾರ್

Update: 2017-04-10 21:42 IST


 ಸೌಹಾರ್ದ ಸಮಾಜದ ನಿರ್ಮಾಣ ಅಗತ್ಯ: ತ್ವಾಖಾ ಅಹ್ಮದ್ ಮುಸ್ಲಿಯಾರ್

ಉಳ್ಳಾಲ,ಎ.10: ಜಿಲ್ಲೆಯಲ್ಲಿ ಸೌಹಾರ್ದ ನೆಲೆನಿಲ್ಲುವಂತೆ ಮಾಡುವ ಪ್ರಯತ್ನ ಎಲ್ಲರಿಂದಲೂ ನಡೆಯಬೇಕು, ಧರ್ಮದ ಮೇಲಿರುವ ಪರಸ್ಪರ ಅಪನಂಬಿಕೆಗಳು ದೂರಗೊಂಡಲ್ಲಿ ಸೌಹಾರ್ದತೆ ಸಾಧ್ಯ ಉದ್ಘಾಟಿಸಿ ಅವರು ಮಾತನಾಡಿದರು.
ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಮಾತನಾಡಿ, 87 ವರ್ಷಗಳ ಹಿಂದೆ ಉಳ್ಳಾಲ ಭಾಗದಲ್ಲಿ ಮಾರಕ ರೋಗ ಬಂದ ಸಂದರ್ಭ ನಡೆಸಿದ ರಾತೀಬ್ ಹರಕೆಯಿಂದ ರೋಗ ಗುಣಮುಖವಾಗಿತ್ತು, ನಂತರ ಪ್ರತೀ ವರ್ಷ ಹರಕೆ ನಡೆಸಲಾಗುತ್ತಿದ್ದು ಯಾವುದೇ ಅಡೆತಡೆಗಳಿಲ್ಲದೆ 87ನೆ ವರ್ಷಕ್ಕೆ ತಲುಪಿದೆ ಎಂದು ಹೇಳಿದರು.
ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ, ವಕೀಲ ಕೆ.ಪಿ.ಶುಕೂರು, ಮನಪಾ ಮಾಜಿ ಮೇಯರ್ ಕೆ.ಅಶ್ರಫ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟಿನ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಪ್ರಮುಖರಾದ ಯು.ಎಚ್.ಅಹ್ಮದ್ ಬಾವ, ಇಬ್ರಾಹೀಂ ಖಾಸಿಂ, ಅಶ್ರಫ್ ಮುಸ್ಲಿಯಾರ್, ಅಲಿ ಅಕ್ಬರ್, ಜಮಾಲ್ ಬಾರ್ಲಿ, ಆಸಿಫ್ ಅಬ್ದುಲ್ಲಾ, ಬಾವಾ ಅಹ್ಮದ್, ಅಹ್ಮ್ಮದ್ ಕಬೀರ್, ಅದ್ದು ಹಾಜಿ, ಮುಸ್ತಫಾ ಇಸ್ಮಾಯೀಲ್, ಆಮಿಲ ಮೋನು, ಬಾವ ಫಕೀರ್ ಸಾಹೇಬ್, ಯು.ಕೆ.ಯೂಸುಫ್ ಉಳ್ಳಾಲ್, ಯು.ಕೆ.ಮುಸ್ತಫಾ ಬಾವ ಮಂಚಿಲ, ಅಬ್ದುಲ್ ಹಮೀದ್ ಬೀಜಮಾರ್ ಮತ್ತಿತರರುಉಪಸ್ಥಿತರಿದ್ದರು.ಆಡಳಿತ ಸಮಿತಿಯ ವ್ಯವಸ್ಥಾಪಕ ರಹೀಂ ಮುಟ್ಟಿಕ್ಕಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News