×
Ad

ನೆಲ್ಯಾಡಿಯಲ್ಲಿ ಎರಡು ಚರ್ಚ್‌ಗಳಿಂದ ಕಳವು

Update: 2017-04-11 10:22 IST

ಉಪ್ಪಿನಂಗಡಿ, ಎ.11: ನೆಲ್ಯಾಡಿ ಸಮೀಪದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಎರಡು ಚರ್ಚ್‌ಗಳಿಗೆ ಕಳ್ಳರು ನುಗ್ಗಿ ನಗದು ಸಹಿತ ಸೊತ್ತುಗಳನ್ನು ಕಳವುಗೈದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಪುತ್ತೂರು ತಾಲೂಕಿನ ನೆಲ್ಯಾಡಿ ಸಮೀಪದ ಕೊಣಾಲುವಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಆರ್ಲ ಎಂಬಲ್ಲಿರುವ ಚರ್ಚ್‌ನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಾಣಿಕೆ ಡಬ್ಬಿಯಿಂದ ನಗದು ಕಳವುಗೈದಿದ್ದಾರೆ.

ನೆಲ್ಯಾಡಿ ಸೇತುವೆ ಬಳಿಯಿರುವ ಇನ್ನೊಂದು ಚರ್ಚ್‌ಗೆ ನುಗ್ಗಿರುವ ಕಳ್ಳರು ಚಿನ್ನ ಲೇಪಿತ ಶಿಲುಬೆಯೊಂದನ್ನು ಕಳವುಗೈದಿರುವುದಾಗಿ ತಿಳಿದುಬಂದಿದೆ.

ಕಳೆದ ರಾತ್ರಿ ಈ ಕೃತ್ಯ ಎಸಗಲಾಗಿದ್ದು, ಎರಡೂ ಪ್ರಕರಣಗಳಲ್ಲಿ ಚರ್ಚಿನ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದಾರೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News