ಎ.16ರಂದು ಉಳ್ಳಾಲದಲ್ಲಿ ರಕ್ತದಾನ ಶಿಬಿರ
Update: 2017-04-11 10:45 IST
ಉಳ್ಳಾಲ, ಎ.11: ಉಳ್ಳಾಲ ಸೆಂಟ್ರಲ್ ಕಮಿಟಿಯು ರೆಡ್‌ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಯೋಗದಲ್ಲಿ ಎ.16ರಂದು ಉಳ್ಳಾಲದಲ್ಲಿರುವ ಉಳ್ಳಾಲ ಸೆಂಟ್ರಲ್ ಕಮಿಟಿಯ ಕಚೇರಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದೆ.
ಅಂದು ಬೆಳಗ್ಗೆ 10ರಿಂದ ಅಪರಾಹ್ನ 3ರವರೆಗೆ ನಡೆಯುವ ಶಿಬಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ರಶೀದ್ ಹಾಜಿ, ಹೋಂಗಾರ್ಡ್ ಕಮಾಂಡರ್ ಡಾ.ಮುರಳಿಮೋಹನ್ ಚೂಂತಾರು, ಮಂಗಳೂರು ಎಸಿಪಿ ಶ್ರುತಿ ಹಾಗೂ ಉಳ್ಳಾಲ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಹ್ಮದ್ ಅನ್ವರ್ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.