×
Ad

ಕೊಡುಂಗಾಯಿಯಲ್ಲಿ ಸಲಫಿ ಸಮಾವೇಶ

Update: 2017-04-11 11:00 IST

ವಿಟ್ಲ, ಎ.11: ಎಸ್.ಕೆ.ಎಸ್.ಎಂ. ಹಮ್ಮಿಕೊಂಡಿರುವ ಕುರ್‌ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ವಿಟ್ಲ ಸಮೀಪದ ಕೊಡುಂಗಾಯಿಯಲ್ಲಿ ಸೋಮವಾರ ರಾತ್ರಿ ಸಲಫಿ ಸಮಾವೇಶ ನಡೆಯಿತು.

ಹಿರಿಯ ವಿದ್ವಾಂಸ ಚುಯ್ಯೆಲಿ ಅಬ್ದುಲ್ಲಾ ಮೌಲವಿ ಉಪನ್ಯಾಸ ನೀಡಿ ಕುರ್‌ಆನ್ ಸುನ್ನತ್‌ಗಳ ಮಹತ್ವವನ್ನು ವಿವರಿಸಿದರು.

ಎಸ್.ಕೆ.ಎಸ್.ಎಂ. ಕೇಂದ್ರ ಸಮಿತಿಯ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ.ಎಸ್.ಎಂ. ಯೂತ್ ವಿಂಗ್ ಅಧ್ಯಕ್ಷ ಶಿಹಾಬ್ ತಲಪಾಡಿ, ಸ್ಥಳೀಯ ಮುಖಂಡರಾದ ಮುಹಮ್ಮದ್ ಕೊಡುಂಗಾಯಿ, ಹಸೈನಾರ್ ಶಾಫಿ ಕರೈ, ಹಸೈನಾರ್ ಸಾಲೆತ್ತೂರು ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು.

ನೌಶಾದ್ ಉಪ್ಪಿನಂಗಡಿ ಸ್ವಾಗತಿಸಿ, ವಂದಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News