×
Ad

ಪತ್ರಕರ್ತೆಗೆ ಅಶ್ಲೀಲ ಸಂದೇಶ ಕಳುಹಿಸಿ ಕೆಲಸ ಕಳೆದುಕೊಂಡ ಕೇರಳ ಮೂಲದ ದುಬೈ ಉದ್ಯೋಗಿ

Update: 2017-04-11 12:17 IST

ದುಬೈ, ಎ.11: ಯುಎಇ ಮೂಲದ ಖಾಸಗಿ ಕಂಪೆನಿಯೊಂದರ ಉದ್ಯೋಗಿಯೊಬ್ಬ ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಅಶ್ಲೀಲ ಸಂದೇಶ ಕಳುಹಿಸಿ ತನ್ನ ಉದ್ಯೋಗ ಕಳೆದುಕೊಂಡಿದ್ದಾನೆ.

ಕೇರಳ ಮೂಲದ ಬಿನ್ಸಿಲಾಲ್ ಬಾಲಚಂದ್ರನ್ (31) ದುಬೈಯಲ್ಲಿರುವ ಆಲ್ಫ ಪೈಂಟ್ಸ್ ಕಂಪೆನಿಯಲ್ಲಿ 2015ರಿಂದ ಕೆಲಸ ಮಾಡುತ್ತಿದ್ದಾನೆ. ಆತ ತನಗೆ ಕಳುಹಿಸಿದ್ದ ಅಪಮಾನಕಾರಿ ಸಂದೇಶ ಬಗೆ ಅಯ್ಯೂಬ್ ಹಲವರ ಗಮನ ಸೆಳೆದಿದ್ದರು. ಆಕೆಯ ಕೆಲ ಅಭಿಮಾನಿಗಳು ಈ ವಿಚಾರವನ್ನು ಬಾಲಚಂದ್ರನ್ ಕೆಲಸಕ್ಕಿದ್ದ ಕಂಪೆನಿಯ ಗಮನಕ್ಕೂ ತಂದಿದ್ದರು.

ಕಂಪೆನಿಯ ಗ್ರಾಹಕ ಸೇವಾ ವಿಭಾಗದ ಉದ್ಯೋಗಿಯಾಗಿರುವ ಬಾಲಚಂದ್ರನ್ ಫೇಸ್ ಬುಕ್ ಮೆಸೆಂಜರ್ ಮೂಲಕ ಅಯ್ಯೂಬ್ ಗೆ ಅಶ್ಲೀಲ ಸಂದೇಶ ಕಳುಹಿಸಿದ್ದನೆನ್ನಲಾಗಿದೆ. ‘‘ಜಸ್ಟ್ ಎ ಸ್ಯಾಂಪಲ್ ಆಫ್ ದಿ ಫಿಲ್ತ್ ಐ ರಿಸೀವ್ ಆನ್ ಮೈ ಫೇಸ್ ಬುಕ್ ಪೇಜ್. ಟೈಮ್ ಟು ನೇಮ್ ಎಂಡ್ ಶೇಮ್ ದಿಸ್ ಪರ್ವರ್ಟ್’’ ಎಂದು ಅಯ್ಯೂಬ್ ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದರು.

‘‘ಆರೋಪಿ ಬಾಲಚಂದ್ರನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆನ್ನಲಾಗಿದೆ. ಯುಎಇ ಸರಕಾರ ಬಿನ್ಸಿ ಲಾಲ್ ವೀಸಾ ರದ್ದುಗೊಳಿಸಿ ಆಗನನ್ನು ಭಾರತಕ್ಕೆ ಕಳುಹಿಸಲಿದೆ. ನಮಗೆ ಕಿರುಕುಳ ನೀಡುವವರಿಗೆ ಒಂದು ಪಾಠ’’ ಎಂದು ರಾಣಾ ಅಯ್ಯೂಬ್ ಟ್ವೀಟ್ ಮಾಡಿದ್ದಾರೆ.
ತರುವಾಯ ಅಯ್ಯುಬ್ ದಿಲ್ಲಿಯಲ್ಲಿ ಈ ಪ್ರಕರಣದ ಬಗ್ಗೆ ಎಫ್ ಐ ಆರ್ ದಾಖಲಿಸಲಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News