ಎ.12-16: ಮಲಾರ್‌ನಲ್ಲಿ ಮತಪ್ರವಚನ ಕಾರ್ಯಕ್ರಮ
ಮಂಗಳೂರು, ಎ.11: ಮಲಾರ್ ಹರೇಕಳದ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಮರ್‌ಹೂಂ ಪಳ್ಳಿಯಬ್ಬ ಹಾಜಿ ವೇದಿಕೆಯಲ್ಲಿ ಎ.12ರಿಂದ 16ರವರೆಗೆ ಅಶೈಖ್ ಯೂಸುಫ್ ಸಿದ್ದೀಖ್ ವಲಿಯುಲ್ಲಾಹಿರವರ ಆಂಡ್ ನೇರ್ಚೆ, ಸ್ವಲಾತ್ ವಾರ್ಷಿಕ, ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಎ.12ರಂದು ಮಸೀದಿಯ ಖತೀಬ್ ಅಬ್ದುರ್ರಝಾಕ್ ಅಝ್ಹರಿ ಪಾತೂರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾರಿಪಳ್ಳ ಮಸೀದಿಯ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ ಮುಖ್ಯಭಾಷಣ ಮಾಡಲಿದ್ದಾರೆ.
ಎ.13ರಂದು ಸೈಯದ್ ಇಬ್ರಾಹೀಂ ಬಾತಿಷ್ ತಂಙಳ್ ಅಝ್‌ಹರಿ ಮತ್ತು ಅಬ್ದುರ್ರಝಾಕ್ ಅಝ್ಹರಿ ಪಾತೂರು,
ಎ.14ರಂದು ಖಾಸಿಮ್ ದಾರಿಮಿ, ಎ.15ರಂದು ಉಸ್ಮಾನ್ ಜೌಹರಿ ಮದನಿ ನಗರ ಪ್ರವಚನ ನೀಡಲಿದ್ದಾರೆ.
ಎ.16ರಂದು ಮಗ್ರಿಬ್ ನಮಾಝ್ ಬಳಿಕ ವೌಲಿದ್ ಪಾರಾಯಣ ನಡೆಯಲಿದೆ. ಬಳಿಕ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಎಚ್.ಎಂ. ಮುಹಮ್ಮದ್ ಮಾಸ್ಟರ್ ವಹಿಸಲಿದ್ದು, ಸೈಯದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು ದುಆಶೀರ್ವಚನ ನೀಡಲಿದ್ದಾರೆ.
ಹಾಫಿಲ್ ಸುಫಿಯಾನ್ ಸಖಾಫಿ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಸಚಿವ ಯು.ಟಿ.ಖಾದರ್, ಡಾ.ಕೆ.ಎಸ್.ಅಮೀರ್ ಅಹ್ಮದ್ ತುಂಬೆ, ಹನೀಫ್ ಖಾನ್ ಕೊಡಾಜೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.