ಸಂಭ್ರಮ-2017 ರಾಜ್ಯಮಟ್ಟದ ಮಾಧ್ಯಮ ಹಬ್ಬ: ಆಳ್ವಾಸ್ ಪತ್ರಿಕೋದ್ಯಮ ವಿಭಾಗಕ್ಕೆ ಸಮಗ್ರ ಪ್ರಶಸ್ತಿ
ಮೂಡುಬಿದಿರೆ, ಎ.11: ಶ್ರೀ ಸಿದ್ದಾರ್ಥ ತಾಂತ್ರಿಕ ವಿದ್ಯಾಲಯದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಂಭ್ರಮ-2017 ರಾಜ್ಯಮಟ್ಟದ ಮಾಧ್ಯಮ ಹಬ್ಬದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಎರಡು ದಿನ ನಡೆದ ರಾಜ್ಯ ಮಟ್ಟದ ಮಾಧ್ಯಮ ಹಬ್ಬದಲ್ಲಿ ಪದವಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರೇಮಸಾಗರ್ (ಪಿಟುಸಿ ಸ್ಪರ್ಧೆ), ಪ್ರಣವೇಶ್ವರ್, ಪ್ರಯಾಗ್ (ಪುಟವಿನ್ಯಾಸ), ಪ್ರೇಮಸಾಗರ್, ಸುಷ್ಮಾ(ವಾಕ್ ಥ್ರೂ), ದೀಪಕ್(ವ್ಯಂಗ್ಯಚಿತ್ರ) ಪ್ರಥಮ ಸ್ಥಾನ ಪಡೆದರು.
ಸುಷ್ಮಾ(ಸುದ್ದಿಬರಹ), ಚೈತಾಲಿ ರೈ( ಸುದ್ದಿ ನಿರೂಪಣೆ,ರೇಡಿಯೋ ಜಾಕಿ) ದ್ವಿತೀಯ ಬಹುಮಾನ ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಆಳ್ವಾಸ್ ಪಡೆಯುವಂತಾಯಿತು.
ಹತ್ತು ಜನ ವಿದ್ಯಾರ್ಥಿಗಳ ತಂಡವನ್ನು ಉಪನ್ಯಾಸಕ ಅಶೋಕ್ ಕೆ.ಜಿ ಹಾಗೂ ವಿಬಾಗದ ಮುಖ್ಯಸ್ಥೆ ರೇಶ್ಮಾ, ಯತಿರಾಜ್ ಜೈನ್, ಪ್ರಕಾಶ್, ನಿಶಾನ್ ಮುನ್ನಡೆಸಿದ್ದರು. ವಿದ್ಯಾರ್ಥಿಗಳ ಈ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ ಕುರಿಯನ್ ಶ್ಲಾಘಿಸಿದ್ದಾರೆ.