×
Ad

​ಬಜ್ಪೆಯಲ್ಲಿ "ನಂಡೆ ಪೆಂಙಳ್" ಜಾಗೃತಿ ಕಾರ್ಯಕ್ರಮ

Update: 2017-04-11 19:25 IST

ಬಜ್ಪೆ, ಎ.11: ಪ್ರಾಯ ಮೂವತ್ತು ಮೀರಿದ ಒಂದು ಸಾವಿರ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವ ಯೋಜನೆ "ನಂಡೆ ಪೆಂಙಳ್" ಅಭಿಯಾನದ ಸಲುವಾಗಿ ಜಾಗೃತಿ ಕಾರ್ಯಕ್ರಮವು ಬಜ್ಪೆಎಂ.ಜೆ.ಎಂ. ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಂ.ಜೆ.ಎಂ. ಬಜ್ಪೆ ಮುದರ್ರಿಸ್ ಅಬ್ದುಲ್ಲಾ ಅಹ್ಸನಿ, ಎಂ.ಜೆ.ಎಂ. ಕೇಂದ್ರ ಜುಮಾ ಮಸೀದಿ ಬಜ್ಪೆಯ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಜವಾಲೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಲೀಂ ಹಾಂದಿ, ಮಾಜಿ ಅಧ್ಯಕ್ಷ ಹಾಜಿ ವಿ. ಮುಹಮ್ಮದ್, ಬಜ್ಪೆ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಮುಹಮ್ಮದ್ ಶರೀಫ್, ಜರ್ರಿ ನಗರ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್, ಇಸ್ಲಾಮಿಕ್ ಎಜುಕೇಶನಲ್ ಸೆಂಟರ್ ಈದ್ಗಾ ಇದರ ಅಧ್ಯಕ್ಷ ಹಾಜಿ ಬದ್ರುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

ನಂಡೆ ಪೆಂಙಳ್ ಅಭಿಯಾನದ ಪ್ರಚಾರ ಮುಖ್ಯಸ್ಥ ರಫೀಕ್ ಮಾಸ್ಟರ್ ಪ್ರಾಯ ಮೂವತ್ತು ದಾಟಿದ ಹೆಣ್ಮಕ್ಕಳ ಬದುಕಿನ ಚಿತ್ರಣವನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿವರಿಸಿದರು. ನಂಡೆ ಪೆಂಙಳ್ ಸ್ವಾಗತ ಸಮಿತಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ ಸಮಾರೋಪ ಭಾಷಣ ಮಾಡಿದರು. ಮುದರ್ರಿಸ್ ಅಬ್ದುಲ್ಲಾ ಅಹ್ಸನಿ ದುಅ ನೆರವೇರಿಸಿದರು.

ಮ್ಯಾರೇಜ್ ಫಂಡ್ ಅಸೋಸಿಯೇಷನ್ ಬಜ್ಪೆ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸ್ವಾಗತಿಸಿದರು. ನಂಡೆ ಪೆಂಙಳ್ ಸಂಚಾಲಕ ಮುಹಮ್ಮದ್ ಯು.ಬಿ ಕಾರ್ಯಕ್ರಮ ನಿರೂಪಿಸಿದರು. ಟಿ.ಆರ್.ಎಫ್‌.ನ ಕಾರ್ಯಕ್ರಮ ಸಂಯೋಜಕ ಅಸ್ಪರ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ "ನಂಡೆ ಪೆಂಙಳ್" ಯೋಜನೆಯ ಯಶಸ್ವಿಗೆ ಸಹಕರಿಸಲು "ನಂಡೆ ಪೆಂಙಳ್" ಬಜ್ಪೆ ವಲಯ ಸಮಿತಿಯನ್ನು ರಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News