ಟ್ಯಾಲೆಂಟ್‌ನಲ್ಲಿ ವಿವಿಧ ಸವಲತ್ತುಗಳ ವಿತರಣೆ

Update: 2017-04-11 14:02 GMT

ಮಂಗಳೂರು, ಎ.11: ಸಣ್ಣ ವ್ಯಾಪಾರಸ್ಥರಿಗೆ ತಳ್ಳುವ ಗಾಡಿಗಳು, ಮಹಿಳೆಯರಿಗೆ ಹೊಲಿಗೆ ಯಂತ್ರಗಳು, ವಿಕಲಚೇತನರಿಗೆ ಗಾಲಿ ಕುರ್ಚಿಗಳು ಮತ್ತು ಮೊಬೈಲ್ ಟೆಕ್ನಿಶಿಯನ್ ಕೋರ್ಸ್ ನ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್‌ಗಳನ್ನು ವಿತರಿಸುವ ಕಾರ್ಯಕ್ರಮ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.

ಶಾಸಕ ಜೆ.ಆರ್. ಲೋಬೊ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದಾರುನ್ನೂರು ಕಾಶಿಪಟ್ನ ಯು.ಎ.ಇ. ಸಮಿತಿಯ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ, ಮುಹಮ್ಮದ್ ಅರಬಿ ಹಾಜಿ ಕುಂಬ್ಳೆ, ಚೇರ್‌ ಮೆನ್ ಮ್ಯಾಕ್ ಗ್ರೂಪ್ ಮುಹಮ್ಮದ್ ಹಾರಿಸ್, ಆಡಳಿತ ನಿರ್ದೇಶಕರು, ಮುಕ್ಕ ಸೀ ಫುಡ್, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಜೋಸೆಫ್ ಕ್ರಾಸ್ತಾ, "ನಂಡೆ ಪೆಂಙಳ್" ಸ್ವಾಗತ ಸಮಿತಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ಮುಖ್ಯ ಲೆಕ್ಕಾಧಿಕಾರಿ ಬಾಲಕೃಷ್ಣ ಅಲ್, ಟ್ಯಾಲೆಂಟ್ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ ಮೊದಲಾದವರು ಉಪಸ್ಥಿತರಿದ್ದರು

ಟಿ.ಆರ್.ಎಫ್. ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಟ್ಯಾಲೆಂಟ್ ಮೊಬೈಲ್ ಕೋರ್ಸ್ ನ ವಿದ್ಯಾರ್ಥಿ ಮೌಲಾನಾ ಹೈದರ್ ಅಲಿ ಕಿರಾಅತ್ ಪಠಿಸಿದರು. ಟಿ.ಆರ್.ಎಫ್. ಅಧ್ಯಕ್ಷ ರಿಯಾಝ್ ಅಹಮದ್ ಕಣ್ಣೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೊಬೈಲ್ ಟೆಕ್ನಿಶಿಯನ್ ತರಬೇತುದಾರ ಅಬ್ದುಲ್ ಮಜೀದ್ ತುಂಬೆ ಫಲಾನುಭವಿಗಳ ಪಟ್ಟಿ ವಾಚಿಸಿದರು. ಟಿ.ಆರ್.ಎಫ್. ಕಾರ್ಯಕ್ರಮ ಸಂಯೋಜಕ ಅಸ್ಫರ್ ಹುಸೈನ್ ವಂದಿಸಿದರು. ಟಿ.ಆರ್.ಎಫ್. ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News