ಹಡಗು ರಕ್ಷಣೆ; ಆದರೆ ನಾವಿಕರನ್ನು ಕರೆದೊಯ್ದ ಕಡಲ್ಗಳ್ಳರು
Update: 2017-04-11 20:53 IST
ಮೊಗಾದಿಶು, ಎ. 11: ಸೊಮಾಲಿ ಭದ್ರತಾ ಪಡೆಗಳು ಸೋಮವಾರ ಅಪಹೃತ ಭಾರತೀಯ ಸರಕು ಹಡಗೊಂದನ್ನು ರಕ್ಷಿಸಿವೆ. ಆದರೆ, ಹಡಗಿನಿಂದ ನಗರದೊಳಕ್ಕೆ ಪಲಾಯನಗೈಯುವ ವೇಳೆ ಕಡಲ್ಗಳ್ಳರು ಹಡಗಿನ 9 ಮಂದಿ ಸಿಬ್ಬಂದಿಯನ್ನು ತಮ್ಮೆಂದಿಗೆ ಅಪಹರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಅಲ್-ಕೌಸರ್ ಹಡಗನ್ನು ಸೊಮಾಲಿ ಕಡಲ್ಗಳ್ಳರು ಈ ತಿಂಗಳ ಆರಂಭದಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
‘‘ಭಾರತೀಯ ಹಡಗಿನ ಮೇಲೆ ದಾಳಿ ನಡೆಸಿ ಅದನ್ನು ನಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ. ಆದರೆ ಕಡಲ್ಗಳ್ಳರು 11 ಸಿಬ್ಬಂದಿಯನ್ನು ತಮ್ಮೆಂದಿಗೆ ಕರೆದುಕೊಂಡು ಹೋದರು. ಇಬ್ಬರು ಸಿಬ್ಬಂದಿಯನ್ನು ರಕ್ಷಿಸಿದ್ದೇವೆ. ಆದರೆ, ಉಳಿದವರನ್ನು ಕರೆದುಕೊಂಡು ಕಡಲ್ಗಳ್ಳರು ಪರ್ವತ ಪ್ರದೇಶಗಳ ಕಡೆ ಹೋಗಿದ್ದಾರೆ’’ ಎಂು ಗಲ್ಮುಡುಗ್ ರಾಜ್ಯದ ಉಪಾಧ್ಯಕ್ಷರು ‘ರಾಯ್ಟರ್’ ಸುದ್ದಿ ಸಂಸ್ಥೆಗೆ ತಿಳಿಸಿದರು.