ಕೇಂಬ್ರಿಜ್ ಗೇಟ್ಸ್ ವಿದ್ಯಾರ್ಥಿವೇತನಕ್ಕೆ 3 ಭಾರತೀಯರು ಆಯ್ಕೆ
Update: 2017-04-11 21:05 IST
ಲಂಡನ್, ಎ. 11: ಈ ಶೈಕ್ಷಣಿಕ ವರ್ಷದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಆಯ್ಕೆಯಾದ 90 ಗೇಟ್ಸ್ ಕೇಂಬ್ರಿಜ್ ವಿದ್ಯಾರ್ಥಿಗಳ ಪೈಕಿ ಮೂವರು ಭಾರತೀಯರಿದ್ದಾರೆ.ಸುಮಾರು 6,000 ಅಭ್ಯರ್ಥಿಗಳಿಂದ ಈ 90 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಬಿಲ್ ಮತ್ತು ಮೆಲಿಂಡ ಗೇಟ್ಸ್ ಫೌಂಡೇಶನ್ ಈ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತದೆ.ಯೈಖೋಂಬ ಮುತುಮ್, ಸಲೋನಿ ಅಟಲ್ ಮತ್ತು ಅಖಿಲಾ ಡೆಂಡುಲುರಿ- ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಆಯ್ಕೆಯಾದ ಭಾರತೀಯರು ಎಂದು ವಿಶ್ವವಿದ್ಯಾನಿಲಯವು ಸೋಮವಾರ ಪ್ರಕಟಿಸಿದೆ.
35 ಅಮೆರಿಕನ್ನರು ಸೇರಿದಂತೆ ಆಯ್ಕೆಯಾದ 90 ಅಭ್ಯರ್ಥಿಗಳು 34 ದೇಶಗಳ ಪ್ರಜೆಗಳು.ಭಾರೀ ಬೇಡಿಕೆಯಿರುವ ಈ ಪದವಿಗಳನ್ನು ವಿವಿಧ ಹಿನ್ನೆಲೆಗಳ 50 ಮಹಿಳೆಯರು ಮತ್ತು 40 ಪುರುಷರಿಗೆ ನೀಡಲಾಗಿದೆ.