ಅಮೆರಿಕದ ಕ್ರಮಗಳಿಗೆ ತಕ್ಕ ಉತ್ತರ : ಉತ್ತರ ಕೊರಿಯ ಎಚ್ಚರಿಕೆ

Update: 2017-04-11 15:51 GMT

ಸಿಯೋಲ್ (ದಕ್ಷಿಣ ಕೊರಿಯ), ಎ. 11: ಕೊರಿಯ ಪರ್ಯಾಯ ದ್ವೀಪದಲ್ಲಿ ಯುದ್ಧ ನೌಕೆಗಳನ್ನು ನಿಯೋಜಿಸಿರುವ ಅಮೆರಿಕದ ನಡೆಯನ್ನು ಉತ್ತರ ಕೊರಿಯ ಮಂಗಳವಾರ ಖಂಡಿಸಿದೆ ಹಾಗೂ ಉದ್ವಿಗ್ನತೆ ಇನ್ನಷ್ಟು ಹೆಚ್ಚಾದರೆ ಯುದ್ಧಕ್ಕೆ ತಾನು ಸಿದ್ಧವಿರುವುದಾಗಿ ಎಚ್ಚರಿಕೆ ನೀಡಿದೆ.

ಈ ವಾರಾಂತ್ಯದಲ್ಲಿ ಆಸ್ಟ್ರೇಲಿಯಕ್ಕೆ ಪ್ರವಾಸ ಹೋಗಬೇಕಿದ್ದ ಕಾರ್ಲ್ ವಿನ್ಸನ್ ನೌಕಾಪಡೆ ಹಡಗು ಕೊರಿಯ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ತನ್ನ ಪ್ರವಾಸವನ್ನು ರದ್ದುಪಡಿಸಿ ಕೊರಿಯದತ್ತ ಧಾವಿಸಿದೆ.

ಪ್ಯಾಂಗ್‌ಯಾಂಗ್‌ನ ಪರಮಾಣು ಚಟುವಟಿಕೆಗಳನ್ನು ನಿಲ್ಲಿಸುವುದಕ್ಕಾಗಿ ಅದರ ಮೇಲೆ ಅಮೆರಿಕ ಆಕ್ರಮಣ ನಡೆಸುವ ಸಾಧ್ಯತೆಯನ್ನು ಈ ಬೆಳವಣಿಗೆ ಹೆಚ್ಚಿಸಿದೆ.

‘‘ಅಮೆರಿಕದ ಇಂಥ ನಿರ್ಲಕ್ಷದ ಕ್ರಮಗಳು ಅದು ಉತ್ತರ ಕೊರಿಯದ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಗಂಭೀರ ಹಂತಕ್ಕೆ ಬಂದಿರುವುದನ್ನು ಸಾಬೀತುಪಡಿಸಿದೆ’’ ಎಂದು ಉತ್ತರ ಕೊರಿಯದ ವಿದೇಶ ಸಚಿವಾಲಯದ ವಕ್ತಾರರೋರ್ವರನ್ನು ಉಲ್ಲೇಖಿಸಿ ಸರಕಾರಿ ವಾರ್ತಾ ಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News