200 ಕೋ.ರೂ.ಗೂ ಹೆಚ್ಚಿನ ಆಸ್ತಿವಂತರ ಸಂಖ್ಯೆ 283ಕ್ಕೇರಿಕೆ
Update: 2017-04-11 21:46 IST
ಹೊಸದಿಲ್ಲಿ,ಎ.11: ಮಾ.31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದಲ್ಲಿ 200 ಕೋ.ರೂ.ಗೂ ಅಧಿಕ ಮೌಲ್ಯದ ಒಟ್ಟು ಆಸ್ತಿಗಳನ್ನು ಹೊಂದಿರುವವರ ಸಂಖ್ಯೆ 283ಕ್ಕೇರಿದೆ.
2015-16ನೇ ಹಣಕಾಸು ವರ್ಷದಲ್ಲಿ ಇಂತಹ ವ್ಯಕ್ತಿಗತ ತೆರಿಗೆದಾತರ ಸಂಖ್ಯೆ 195 ಇತ್ತು ಎಂದು ಸಹಾಯಕ ವಿತ್ತಸಚಿವ ಸಂತೋಷ ಕುಮಾರ ಗಂಗ್ವಾರ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.
ಕಳೆದ ಕೆಲವು ವರ್ಷಗಳಿಂದ ಈ ಸಂಖ್ಯೆ ಹೆಚ್ಚುತ್ತಲೇ ಇದೆ. 2013-14ರಲ್ಲಿ 200 ಕೋ.ರೂ.ಗೂ ಹೆಚ್ಚಿನ ಆಸ್ತಿವಂತರ ಸಂಖ್ಯೆ 107 ಇತ್ತು ಮತ್ತು 2014-15ನೇ ವರ್ಷಕ್ಕೆ ಈ ಸಂಖ್ಯೆ 134ಕ್ಕೆ ಏರಿತ್ತು.
ಬಿಲಿಯಾಧಿಪತಿಗಳ ಸಂಖ್ಯೆಯಲ್ಲಿ ಏರಿಕೆಗೆ ಸಂಬಂಧಿಸಿದಂತೆ ಭಾರತವು ಎರಡನೇ ಸ್ಥಾನದಲ್ಲಿದೆಯೇ ಎಂಬ ಪ್ರಶ್ನೆಗೆ, ಇಂತಹ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಗಂಗ್ವಾರ್ ಉತ್ತರಿಸಿದರು.